ಮೂಡುಬಿದಿರೆ : ನಾಟಕ ರಚನೆಗಾರ ಗಣೇಶ್ ಅಳಿಯೂರು ಸಂಚಾಲಕತ್ವದ ವಿದ್ಯಾಗಣಪತಿ ಕಲಾ ಪ್ರತಿಷ್ಠಾನ ಅಳಿಯೂರು ಇದರ ವಾಷಿ೯ಕೋತ್ಸವದ ಅಂಗವಾಗಿ ಪಟ್ಟದ ಕತ್ತಿ ಯಕ್ಷಗಾನ ಪ್ರದರ್ಶನ,
ಸಾಧಕರಿಗೆ ಸನ್ಮಾನ, ಕಲಾವಿದರಿಗೆ ಅಭಿನಂದನೆ ಕಾಯ೯ಕ್ರಮ ನಡೆಯಲಿದ್ದು ಇದರ
ಅಮಂತ್ರಣ ಪತ್ರ ಬಿಡುಗಡೆಯು ಭಾನುವಾರ ಅಳಿಯೂರು ಗರಡಿಯಲ್ಲಿ ನಡೆಯಿತು.
ಗರಡಿ ಪ್ರೆಂಡ್ಸ್ ಅದ್ಯಕ್ಷರಾದ ಹರೀಶ್ ಪೂಜಾರಿ, ಫ್ರೆಂಡ್ಸ್ ಅಳಿಯೂರು ತಂಡದ ಲೋಕೇಶ ಬಿ.ಪೂಜಾರಿ,
ಪ್ರಸಂಗ ಕರ್ತ ಗಣೇಶ್ ಬಿ. ಅಳಿಯೂರು, ಗರಡಿ ಫ್ರೆಂಡ್ಸ್ ಹಾಗೂ ಫ್ರೆಂಡ್ಸ್ ಅಳಿಯೂರು ಹಾಗೂ ವಿದ್ಯಾಗಣಪತಿ ಕಲಾ ಪ್ರತಿಷ್ಠಾನ ಸದಸ್ಯರು ಉಪಸ್ಥಿತರಿದ್ದರು.

0 Comments