ಲಾರಿ ಬ್ರೇಕ್ ಫೇಲ್ : ಅಂಗಡಿ ಮೇಲೆ ಬಿದ್ದು ಹಾನಿ

ಲಾರಿ ಬ್ರೇಕ್ ಫೇಲ್ : ಅಂಗಡಿ ಮೇಲೆ ಬಿದ್ದು ಹಾನಿ

ಮೂಡುಬಿದಿರೆ: ಲಾರಿಯೊಂದು ಬ್ರೇಕ್ ಫೇಲ್ ಆಗಿ ಹಿಮ್ಮುಖವಾಗಿ ಚಲಿಸಿ ಸಮೀಪದಲ್ಲಿದ್ದ ಅಂಗಡಿಯ ಅಂಗಳದ ಮೇಲೆ ಬಿದ್ದು, ಅಂಗಡಿಗೆ ಹಾನಿಯುಂಟಾದ ಘಟನೆ ಮೂಡುಬಿದಿರೆ ತಾಲೂಕಿನ  ತೋಡಾರು ಕೊಡಮಣಿತ್ತಾಯ  ದ್ವಾರದ ಬಳಿ ಭಾನುವಾರ ನಡೆದಿದೆ. 

ಯೆನೆಪೋಯ ಕಾಲೇಜಿನ ಗೇಟ್‌ನಿಂದ ಹೊರಬಂದು ಮೇಲಿನ ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ಲಾರಿಯ ಬ್ರೇಕ್ ಫೇಲ್ ಆಗಿದ್ದು, ವಾಹನವು ನೇರವಾಗಿ ಹಿಮ್ಮುಖವಾಗಿ ಚಲಿಸಿದೆ ಎಂದು ತಿಳಿದುಬಂದಿದೆ.
ಹಿಂಬದಿಗೆ ಚಲಿಸಿದ ಲಾರಿ ಸಮೀಪದಲ್ಲಿದ್ದ ಅಂಗಡಿಯ ಅಂಗಳದ ಮೇಲೆ ಬಿದ್ದ ಪರಿಣಾಮ ಅಂಗಡಿಗೆ ಹಾನಿಯಾಗಿದೆ.

Post a Comment

0 Comments

Advertisement