ಮೂಡುಬಿದಿರೆಯಲ್ಲಿ "ಸಿದ್ಧ ನವಗ್ರಹ ತೀರ್ಥಂಕರ ಮಹಾ ಆರಾಧನೆ – ಆಹ್ವಾನ ಕಾರ್ಯಕ್ರಮ"

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆಯಲ್ಲಿ 
*ಸಿದ್ಧ ನವಗ್ರಹ ತೀರ್ಥಂಕರ ಮಹಾ ಆರಾಧನೆ – ಆಹ್ವಾನ ಕಾರ್ಯಕ್ರಮ* 

ಪರಮ ಪೂಜ್ಯ ಆಚಾರ್ಯ ಶ್ರೀ 108 ಅನೇಕಾಂತ ಸಾಗರ ಮುನಿ ಮಹಾರಾಜರು ಹಾಗೂ ಸಂಘ ದವರ ಪಾವನ ಸಾನಿಧ್ಯ, ವಿವಿಧ ಮಠಗಳ  ಭಟ್ಟಾರಕ ಸ್ವಾಮೀಜಿಗಳ ಪಾವನ ಮಾರ್ಗದರ್ಶನ, ವರ್ಷಾ ಯೋಗ ಸಂರಕ್ಷಕರಾದ ಪರಮ ಪೂಜ್ಯ ಶ್ರೀ ಡಿ. ವೀರೇದ್ರ ಹೆಗ್ಗಡೆ ದಂಪತಿಗಳ ಹಾಗೂ ಚಾತುರ್ಮಾಸ ಸಮಿತಿಯ ಶ್ರೀ ಡಿ. ಸುರೇoದ್ರ ಕುಮಾರ್ ಮತ್ತು ಶ್ರೀಮತಿ ಅನಿತಾ ಸುರೇoದ್ರ ಕುಮಾರ್ ರವರ ಆಶಯದಂತೆ, ವಿವಿಧ ಸಮಿತಿಗಳ ಆಯೋಜಕತ್ವದಲ್ಲಿ  *ಸಿದ್ಧ ನವ ಗ್ರಹ ತೀರ್ಥOಕರ ಮಹಾ ಆರಾಧನೆ*, ದಿನಾಂಕ *25/10/2026 ಭಾನುವಾರ, ಅರಮನೆ ಮೈದಾನ, ಬೆಂಗಳೂರು* ಇಲ್ಲಿ ನಡೆಯಲಿದೆ.
 ಈ ಐತಿಹಾಸಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಆರಾಧನೆಯ ಬಗ್ಗೆ ಮಾಹಿತಿ ಕಾರ್ಯಕ್ರಮ  ಮೂಡುಬಿದರೆಯ  *ಶ್ರೀ ಗುರುಬಸದಿಯ ಲ್ಲಿ*  ನಡೆಯಿತು.
 
 ಕಾರ್ಯಕ್ರಮದ ಪೋಸ್ಟರ್‌ನ್ನು ಬಸದಿಯಲ್ಲಿ ಇರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೇಳಿ ಕೊಳ್ಳಲಾಯಿತು.

 ಭಾರತೀಯ ಜೈನ್ ಮಿಲನ ಜೊತೆ ಕಾರ್ಯದರ್ಶಿ ಶ್ವೇತಾಜೈನ್ ರವರು ಆರಾಧನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ವಲಯ ನಿರ್ದೇಶಕರಾದ ವೀರ್ ಜಯರಾಜ್ ಕಂಬಳಿ, 
ಮೂಡುಬಿದಿರೆ ಜೈನ ಮಿಲನ್ ಅಧ್ಯಕ್ಷರಾದ ವೀರ್ ಮಹೇಂದ್ರ ಕುಮಾರ್,  ಕಾರ್ಯದರ್ಶಿ ವೀರ್ ವೈ ಶಶಿಕಾಂತ್ ಎಳನೀರು ಕೋಶಾಧಿಕಾರಿ ವೀರ್  ಶ್ರೇಯಾಂಶ್ ಹೆಗ್ಡೆ, ವೀರ್ ಶoಭವ ಕುಮಾರ್, ವೀರಾಂಗನ ವೃಂದರಾಜೇಂದ್ರ, ವೀರಂಗನ ವೀಣಾ ರಘುಚಂದ್ರ ಶೆಟ್ಟಿ ವೀರಾಂಗನ ಮಂಜುಳಾ ಅಭಯ ಚಂದ್ರ ಜೈನ್ ಮತ್ತು ಜೈನ್ ಮಿಲನ್ ಸದಸ್ಯರು ಹಾಗೂ ಸರ್ವ ಮಂಗಳ ಮಹಿಳಾ ಸಂಘದ  ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Advertisement