ಮೂಡುಬಿದಿರೆ : ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಇದರ ವತಿಯಿಂದ 37ನೇ ವಷ೯ದ ಗಣೇಶೋತ್ಸವವು ಸೆ. 14ರಿಂದ 16ರವರೆಗೆ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಕುಂಗೂರು ಚಾವಡಿಮನೆ ಶಿವಪ್ರಸಾದ್ ಆಚಾರ್ ನೇತೃತ್ವದಲ್ಲಿ ಸಮಿತಿಯ ಅಧ್ಯಕ್ಷ ರಾಜೇಶ್ ಸುವಣ೯ ಒಂಟಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪಡು-ಮೂಡುಕೊಣಾಜೆ : ಶ್ರೀ ಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ಇದರ ವತಿಯಿಂದ 14ನೇ ವಷ೯ದ ಸಾವ೯ಜನಿಕ ಶ್ರೀ ಗಣೇಶೋತ್ಸವವು ಸೆ. 14ರಂದು ಹೌದಾಲ್ ಶ್ರೀ ಗಣೇಶ ಪೂಜಾ ಸಮಿತಿಯ ವಠಾರದಲ್ಲಿ ಅಸ್ರಣ್ಣ ಉಮಾಶಂಕರ್ ಭಟ್ ಅವರ ನೇತೃತ್ವ ಹಾಗೂ ಸಮಿತಿಯ ಅಧ್ಯಕ್ಷ ಸಂದೀಪ್ ಸುವಣ೯ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಬೆಳುವಾಯಿ :ತುಳುನಾಡು ಯುವಜನ ಸೇವಾ ಸಂಘ ಬೆಳುವಾಯಿ ಇದರ 39ನೇ ವಷ೯ದ ಸಾವ೯ಜನಿಕ ಗಣೇಶೋತ್ಸವವು ಸೆ. 14-16ರವರೆಗೆ ಬೆಳುವಾಯಿ ಹೋಮಲ್ಕೆಯ ಅಂಗಡಿ ಮನೆ ಕಮಲಮ್ಮ ಕಾಂಪ್ಲೆಕ್ಸ್ ನ ವಠಾರದಲ್ಲಿ ನಡೆಯಲಿದೆ.
ಕಲ್ಲಬೆಟ್ಟು :ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು, ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ವಣ೯ಗೌರಿ ಮಾತೃಮಂಡಳಿ ಕಲ್ಲಬೆಟ್ಟು-ಕರಿಂಜೆ-ಮಾರೂರು ಇದರ 25ನೇ ವಷ೯ದ ಸಾವ೯ಜನಿಕ ಶ್ರೀ ಗಣೇಶೋತ್ಸವವು ಸೆ. 14ರಂದು ಶ್ರೀ ಗಣೇಶ ಸೇವಾಧಾಮ ಕಲ್ಲಬೆಟ್ಟು ಇಲ್ಲಿ ನಡೆಯಲಿದೆ.
ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಬೈಲೂರು ಅಧ್ಯಕ್ಷತೆಯಲ್ಲಿ ಕಾಯ೯ಕ್ರಮ ನಡೆಯಲಿದೆ.

0 Comments