ಬನ್ನಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ : ಸಾಧಕರಿಗೆ ಸಮ್ಮಾನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಬನ್ನಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ : ಸಾಧಕರಿಗೆ ಸಮ್ಮಾನ

ಮೂಡುಬಿದಿರೆ:  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬನ್ನಡ್ಕ ಇದರ ವತಿಯಿಂದ ನಡೆದ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ 
ಸಮಾರೋಪ ಸಮಾರಂಭದಲ್ಲಿ  ಮಾವೇದಾಸ್ ನ ಅನುಷಾ ಪ್ರಜ್ವಲ್ ಆಚಾರ್, ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕಿಶೋರ್ ಕುಮಾರ್, ಬಹುಮುಖ ಪ್ರತಿಭೆ ನಟಿ ಕು. ಸಪ್ನ ಅವರನ್ನು ಸಮ್ಮಾನಿಸಲಾಯಿತು. 

ಸಮಾರಂಭದಲ್ಲಿ ಬನ್ನಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ ಬಲ್ಲಾಳ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ, ಉದ್ಯಮಿ ಬೋಳ ವಿಶ್ವನಾಥ ಕಾಮತ್,
ಸಹಾಯಕ ಪೋಲೀಸ್ ಉಪ ನಿರೀಕ್ಷಕ ರಾಜೇಶ್, ಸತೀಶ್ ಪೂಜಾರಿ ಬನ್ನಡ್ಕ, ರಾಜಶ್ರೀ ಹುಲೇಕಲ್ ಅತಿಥಿಗಳಾಗಿ ಪಾಲ್ಗೊಂಡು ಸಾಧಕರನ್ನು ಗೌರವಿಸಿದರು.

ವೇದಿಕೆಯಲ್ಲಿ ಸಮಿತಿ ಸದಸ್ಯರಾದ ಸೂರಜ್ ಬನ್ನಡ್ಕ , ನೇಮಿರಾಜ್ ಬಲ್ಲಾಳ್, ಉಮೇಶ್ ಬಿ. ಸಾಲ್ಯಾನ್, ಸದಾಶಿವ , ಸತೀಶ್ ರಾವ್, ಧರಣೇಂದ್ರ ಜೈನ್, ಮಹೇಶ್ ಹುಲೇಕಲ್ , ಉದ್ಯಮಿ ಪ್ರಜ್ವಲ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ವಿವೇಕಾನಂದ ಕಾಮತ್ ವಂದಿಸಿದರು.

Post a Comment

0 Comments

Advertisement