ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಅಲಂಗಾರಿನಲ್ಲಿ ಸಹಿ ಅಭಿಯಾನ*

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

*ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಅಲಂಗಾರಿನಲ್ಲಿ ಸಹಿ ಅಭಿಯಾನ* 
ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಸಬೇಕು, ನಿರ್ಮೂಲನೆ ಮಾಡಬೇಕು.ರಾಷ್ಟ್ರ ಮಾತೆ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪೂಜೆ, ರಾಷ್ಟ್ರೀಯ ಪರಂಪರೆ ಯ ಸ್ಥಾನಮಾನ ನೀಡಬೇಕು.ಗೋಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು ಮತ್ತು ಗೋ ಸೇವೆಗಾಗಿ ಕೇಂದ್ರೀಯ ಸಚಿವಾಲಯವನ್ನು ಸ್ಥಾಪಿಸಬೇಕು. ಮೇವು ಭದ್ರತಾ ನೀತಿಯನ್ನು ಅಂತಿಮಗೊಳಿಸಬೇಕು.ಗೋವು ಆಧಾರಿತ ಕೃಷಿಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವೇದ ಲಕ್ಷಣ ಗೋವಂಶದ ಜಾನುವಾರುಗಳಿಂದ ಪಡೆದ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಹೆಚ್ಚಿಸಬೇಕು ಒತ್ತಾಯಿಸಿ ಇಲ್ಲಿನ ಅಲಂಗಾರಿನಲ್ಲಿ ನಾಗರಿಕರ ಸಹಿ ಸಂಗ್ರಹ ಅಭಿಯಾನವನ್ನು  ಹಮ್ಮಿಕೊಳ್ಳಲಾಯ್ತು.
ಪಡುಮಾರ್ನಾಡು ಜನತಾ ವಿವಿದ್ದೋದ್ದೇಶ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ತಂಡವು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಸಿಬ್ಬಂದಿಗಳನ್ನು ಭೇಟಿ ಮಾಡಿ ಅಭಿಯಾನಕ್ಕೆ ಬೆಂಬಲ ಕೋರಿದ್ದರ ಮೇರೆಗೆ ಬೆಂಬಲ ವ್ಯಕ್ತವಾಗಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯ್ತು. ಸಹಕಾರಿ ಸಂಘದ ಅಧ್ಯಕ್ಷ ಎಂ ದಯಾನಂದ ಪೈ, ನಿರ್ದೇಶಕಿ ಶ್ರೀಮತಿ ಉಷಾ ಡಿ ಪೈ ಉಪಾಧ್ಯಕ್ಷ ರಾಜೇಶ್ ಕಾಮತ್, ಕಾರ್ಯದರ್ಶಿ ಉಮಾವತಿ ಸಹಿತ ಇತರ ನಿರ್ದೇಶಕರುಗಳು ಉಪಸ್ಥಿತರಿದ್ದು ಸಹಕರಿಸಿದರು.ಮೂಡಬಿದ್ರಿಯ ಗೋ ಸೇವಾ ಸಂಯೋಜಕ 
ಅಮೃತ ಸಾವಯವ ಮಳಿಗೆಯ  ಅಲಂಗಾರು ಅಶೋಕ ಭಂಡಾರಿಯವರು ತಂಡದ ನೇತ್ರತ್ವವನ್ನು ವಹಿಸಿದ್ದರು.

Post a Comment

0 Comments

Advertisement