ಶಿತಾ೯ಡಿ ಗಣೇಶೋತ್ಸವ ಸಮಿತಿಯಿಂದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ

ಶಿತಾ೯ಡಿ ಗಣೇಶೋತ್ಸವ ಸಮಿತಿಯಿಂದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ

ಮೂಡುಬಿದಿರೆ : ಶಿತಾ೯ಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ
30 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಮೂಡುಬಿದಿರೆ ಆಳ್ವಾಸ್  ಹೆಲ್ತ್ ಸೆಂಟರ್ ಸಹಯೋಗದೊಂದಿಗೆ   ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣೆ ಶಿತಾ೯ಡಿ ಬಸ್‌ ನಿಲ್ದಾಣದ ಬಳಿ ಇಂದು ಜರುಗಿತು. ಆಳ್ವಾಸ್ ಆಸ್ಪತ್ರೆಯ ವೈದ್ಯರಾದ ಡಾ ಹರ್ಷಿತಾ, ಡಾ. ಕೃಷ್ಣ ಉನ್ನಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೂರಜ್ ಜೈನ್, ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಕಾರ್ಯದರ್ಶಿ ಗಿರೀಶ್ ಶಿವಗಿರಿ, ಕೋಶಾಧಿಕಾರಿ ರಮಾನಂದ ಹಾಗೂ ಪದಾಧಿಕಾರಿಗಳು ಮತ್ತು ಊರವರು ಶಿಬಿರದಲ್ಲಿ ಭಾಗವಹಿಸಿದ್ದರು. ಸುಮಾರು 97 ಮಂದಿ ಹೃದಯ ತಪಾಸಣೆ ನಡೆಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. 50 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.

Post a Comment

0 Comments

Advertisement