ಮೂಡುಬಿದಿರೆ ಬಿಲ್ಲವ ಸಂಘದಿಂದ ಸಾರ್ವಜನಿಕ ವರಮಹಾಲಕ್ಷ್ಮಿ ವ್ರತ ಪೂಜೆ

ಮೂಡುಬಿದಿರೆ ಬಿಲ್ಲವ ಸಂಘದಿಂದ  ಸಾರ್ವಜನಿಕ ವರಮಹಾಲಕ್ಷ್ಮಿ ವ್ರತ ಪೂಜೆ

ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ನಾರಾಯಣಗುರು ಸೇವಾದಳ ಹಾಗೂ ನಾರಾಯಣಗುರು ಮಹಿಳಾ ಘಟಕದ ವತಿಯಿಂದ 9ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ವ್ರತ ಪೂಜೆಯು ಶುಕ್ರವಾರ ನಡೆಯಿತು.

ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಜಿತೇಶ್, ಕಾರ್ಯದರ್ಶಿ ಸುಶ್ಮಿತಾ ಕೋಟ್ಯಾನ್, ಕೋಶಾಧಿಕಾರಿ ಸ್ಮಿತಾ ಬಾಸ್ಕರ, ಉಪಾಧ್ಯಕ್ಷರಾದ ಮಮತಾ ನಾರಾಯಣ ಹಾಗೂ ಪೂರ್ಣಿಮಾ ಬಾಲಕೃಷ್ಣ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಹಕರಿಸಿದರು.

ಮಾತೃ ಸಂಘದ ಅಧ್ಯಕ್ಷ ನವೀನ್ಚಂದ್ರ, ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಸೇವಾದಳದ ಅಧ್ಯಕ್ಷ ಶಶಿಕಿರಣ್ ಹಾಗೂ ಕಾರ್ಯದರ್ಶಿ ಹರೀಶ್ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Advertisement