ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘದಿಂದ ಅಶಕ್ತ ಕುಟುಂಬಕ್ಕೆ "ಆಶ್ರಯ" ಮನೆ ಹಸ್ತಾಂತರ

ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘದಿಂದ ಅಶಕ್ತ ಕುಟುಂಬಕ್ಕೆ "ಆಶ್ರಯ" ಮನೆ ಹಸ್ತಾಂತರ 

ಮೂಡುಬಿದಿರೆ : ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘ ಮೂಡುಬಿದಿರೆ ಇದರ ವತಿಯಿಂದ ಆಲಂಗಾರಿನ ಬಸವನಕಜೆಯ ಬಡ ಕುಟುಂಬಕ್ಕೆ ನಿಮಿ೯ಸಿರುವ "ಆಶ್ರಯ" ಮನೆಯ ಹಸ್ತಾಂತರ ಕಾಯ೯ಕ್ರಮವು ಶನಿವಾರ ನಡೆಯಿತು. 
   
ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಸಕ್ತ ಕುಟುಂಬದ ಲಕ್ಷ್ಮೀ-ಡಾಕಯ್ಯ ದಂಪತಿಗೆ ಮನೆಯ ಕೀಯನ್ನು ಹಸ್ತಾಂತರಿಸಿ ಮಾತನಾಡಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಹಲವಾರು ಸೇವಾ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿವೆ. ಇದೀಗ ಸೇವಾ ಮನೋಭಾವವನ್ನು ಹೊಂದಿರುವ ಮಹಿಳೆಯರು ಸೇರಿ ಅಶಕ್ತರಿಗೆ ಮನೆಯನ್ನು ನಿಮಿ೯ಸಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. 

  ಪಡುಮಾನಾ೯ಡು ಗ್ರಾ. ಪಂ. ಮಾಜಿ ಅಧ್ಯಕ್ಷ ದಯಾನಂದ ಪೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಪ್ರದೇಶದಲ್ಲಿ ಮೊದಲು ಯಾವುದೇ ಮೂಲಭೂತ ಸೌಕಯ೯ಗಳಿರಲಿಲ್ಲ ಇದೀಗ ಪಂಚಾಯತ್ ನಿಂದಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಬೇರೆ ಬೇರೆ ಕಾರಣಗಳಿಂದ ಈ ಕುಟುಂಬಕ್ಕೆ ಮನೆ ನಿಮಾ೯ಣವಾಗಿರಲಿಲ್ಲ ಆದರೆ ಮಹಿಳೆಯರ ತಂಡವು ಸೇರಿ ಸೂರೊಂದನ್ನು ನಿಮಿ೯ಸಿಕೊಡುವ ಮೂಲಕ ಗಮನ ಸೆಳೆದಿದೆ ಎಂದರು. 
  
ಅಶಕ್ತ ಹಿಂದೂ ಬಾಂಧವ್ಯ ಸೇವಾನಿಧಿ ಮಹಿಳಾ ಸಂಘ ಮೂಡುಬಿದಿರೆ ಅಧ್ಯಕ್ಷೆ ಮುಕಾಂಬಿಕಾ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ  ಏಳು ತಿಂಗಳ ಹಿಂದೆ ನಡೆದ ಹಿಂದೂ ಸಮಾಜೋತ್ಸವದ ಸಂದಭ೯ದಲ್ಲಿ ಪ್ರೇರಣೆ ಪಡೆದು ಈ ಮಹಿಳಾ ಸಂಘವು ಅಸ್ತಿತ್ವಕ್ಕೆ ಬಂದಿದೆ. ಹಿಂದೂ ಸಮಾಜಕ್ಕೆ ತಮ್ಮಿಂದ ಏನಾದರೂ ಸಹಾಯವಾಗಬೇಕೆಂಬ ಉದ್ದೇಶದಿಂದ ಅಸಕ್ತ ಕುಟುಂಬಕ್ಕೆ ಮನೆ ನಿಮಿ೯ಸುವ ಯೋಜನೆಯನ್ನು ಹಾಕಿಕೊಂಡು ದಾನಿಗಳ ಸಹಕಾರ ಪಡೆದು ಮನೆಯನ್ನು ನಿಮಿ೯ಸಿದ್ದೇವೆ ಎಂದರು. 

ದಾನಿ ರೇಖಾ ಜಯರಾಮ್ ಶೆಟ್ಟಿ, ರೋಟರಿ ಟೆಂಪಲ್ ಟೌನ್ ನ ಮಾಜಿ ಅಧ್ಯಕ್ಷ ಪೂಣ೯ಚಂದ್ರ ಜೈನ್ ಉಪಸ್ಥಿತರಿದ್ದರು. 
  ಮನೆ ನಿಮಾ೯ಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. 
ರೋಟರಿ ಟೆಂಪಲ್ ಟೌನ್ ನ ಮಾಜಿ ಅಧ್ಯಕ್ಷ ಹರೀಶ್ ಎಂ. ಕೆ ಕಾಯ೯ಕ್ರಮ ನಿರೂಪಿಸಿದರು. ಮಹಿಳಾ ಸಂಘದ ಕಾಯ೯ದಶಿ೯ ಶಾಂತಾ ಭಂಡಾರಿ ವಂದಿಸಿದರು.

------------------------------
ಅಶಕ್ತರ ನೆರವಿಗಾಗಿ ಶ್ಯಾವಿಗೆ ಉದ್ಯಮ ಆರಂಭಿಸಿದ ಮೂಕಾಂಬಿಕ 

*ಮೂಕಾಂಬಿಕ ಏಳು ತಿಂಗಳ ಆರಂಭಿಸಿದ ಅಶಕ್ತ ಹಿಂದೂ ಬಾಂಧವ್ಯ ಸೇವಾ ನಿಧಿ ಮಹಿಳಾ ಸಂಘದಲ್ಲಿ 6 ಮಂದಿ ಮಹಿಳಾ ಸದಸ್ಯರಿದ್ದಾರೆ. 
 ಹಿಂದೂ ಸಮಾಜದಲ್ಲಿ ಹಲವಾರು ಮಂದಿ ಅಶಕ್ತ ಕುಟುಂಬಗಳಿವೆ. ಅವರಿಗೆ ಯಾಕೆ ಬೇರೆ ಸಮುದಾಯದವರು ಸಹಾಯ ಮಾಡಬೇಕು ನಾವೇ ಸಹಕಾರ ನೀಡುವುದು ಒಳಿತಲ್ಲವೇ ಎಂಬುದನ್ನು ಯೋಚಿಸಿದರು. 
 ಅವರು ಮುಸ್ಲಿಂ ಸಮುದಾಯ ಮತ್ತು ಕ್ರಿಶ್ಚಿಯನ್ ಸಮುದಾಯದ ಅಂಗಡಿಗಳಿಗೆ ಹೋದಾಗ ಅಲ್ಲಿ ಚಿಕ್ಕದೊಂದು ಡಬ್ಬದಲ್ಲಿ ಹಣವನ್ನು ಹಾಕಿಟ್ಟು ಇದು ಬಡವರ ನೆರವಿಗಾಗಿ ಎಂಬುದನ್ನು ಬರೆದಿಟ್ಟಿರುವುದನ್ನು ಗಮನಿಸಿದ್ದರು. 

ಹಿಂದೂಗಳು ಯಾಕೆ ಹೀಗೆ ಮಾಡಿ ಹಿಂದೂ ಸಮಾಜದ ಬಡವರಿಗೆ ಸಹಾಯ ಮಾಡಬಾರದು ಎಂಬುದನ್ನು  ಸವಾಲಾಗಿ ತೆಗೆದುಕೊಂಡ ಅವರು ತಮ್ಮ ಸಂಘದ ಸದಸ್ಯರಿಗೆ ಮತ್ತು ಕೆಲವು ಪರಿಚಿತರಿಗೆ ಇಂತಹ ಡಬ್ಬಗಳನ್ನು ನೀಡಿ ಅದರಲ್ಲಿ ಹಣವನ್ನು ಒಟ್ಟುಗೂಡಿಸಿ ಅಶಕ್ತರಿಗೆ ನೆರವು ಮಾಡುವ ಬಗ್ಗೆ ಹೆಜ್ಜೆ ಇಟ್ಟರು. 
 ಬೇರೆ ಯಾರ್ಯಾರ ಬಳಿ ಸಹಾಯ ಕೇಳುವಾಗ ಮುಜಗರಕ್ಕೆ ಒಳಗಾದ ಮೂಕಾಂಬಿಕ ಅವರು ಮನೆಯಲ್ಲಿಯೇ ಸಣ್ಣದಾಗಿ ಶ್ಯಾವಿಗೆ ಉದ್ಯಮವನ್ನು ಆರಂಭಿಸಿದ್ದಾರೆ ಇದರಲ್ಲಿ ಬರುವ ಹಣವನ್ನು ಅವರು ಅಶಕ್ತರ ನೆರವಿಗಾಗಿ ವಿನಿಯೋಗಿಸಲು ಹೊರಟಿದ್ದಾರೆ. 
---------------====

Post a Comment

0 Comments

Advertisement