ಮೂಡುಬಿದಿರೆ ಭಂಡಾರಿ ಸಮಾಜದಿಂದ ಆಟಡೊಂಜಿ ದಿನ : ವಿವಿಧ ಸ್ಪಧೆ೯ಗಳು,ಸಾಂಸ್ಕೃತಿಕ ಕಾಯ೯ಕ್ರಮಗಳ ಅನಾವರಣ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ ಭಂಡಾರಿ ಸಮಾಜದಿಂದ ಆಟಡೊಂಜಿ ದಿನ : ವಿವಿಧ ಸ್ಪಧೆ೯ಗಳು,ಸಾಂಸ್ಕೃತಿಕ ಕಾಯ೯ಕ್ರಮಗಳ ಅನಾವರಣ
ಮೂಡುಬಿದರೆ ಭಂಡಾರಿ ಸಮಾಜ ಸೇವಾ (ರಿ) ಇದರ ಆಶ್ರಯದಲ್ಲಿ 13ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾ ವೇದಿಕೆಯಲ್ಲಿ ನಡೆಯಿತು. 
  ನಿವೃತ್ತ ಪ್ರಾಂಶುಪಾಲರಾದ ಕೆ. ವಿ ಭಂಡಾರಿ ಸಾಣೂರು ಕಾಯ೯ಕ್ರಮವನ್ನು ಉದ್ಘಾಟಿಸಿದರು. 
  
ಭಂಡಾರಿ ಮಹಾಮಂಡಲ(ರಿ) ಪ್ರಧಾನ ಕಾರ್ಯದರ್ಶಿ ವಿಶ್ವ ಭಂಡಾರಿ ಉಜಿರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮೂಡಬಿದಿರೆ ಭಂಡಾರಿ ಸಂಘದ ಸಾಧನೆ ಬಗ್ಗೆ ಮತ್ತು ಮಹಾಮಂಡಲದ ವತಿಯಿಂದ ಮೂಡಬಿದಿರಿ ಭಂಡಾರಿ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಪೂರಕ ವ್ಯವಸ್ಥೆಯನ್ನು ನೀಡುವುದಾಗಿ ತಮ್ಮ ಮಾತಿನಲ್ಲಿ ತಿಳಿಸಿದರು.

 ಸಂಘದ ಅಧ್ಯಕ್ಷ ಗುರುಪ್ರಸಾದ್ ಭಂಡಾರಿ ಅಧ್ಯಕ್ಷತೆಯಲ್ಲಿ ಚಲನಚಿತ್ರ ರಂಗಭೂಮಿಯ ನಿರ್ದೇಶಕ ಕೀರ್ತನ್ ಭಂಡಾರಿ ಕುಳಾಯಿ ಅವರು ಆಟ ತಿಂಗಳ ಮಹತ್ವವನ್ನು ತಿಳಿಸಿದರು.

  ಯುವ ಲೇಖಕ ಕಿಶೋರ್ ಕುಮಾರ್ ಎಕ್ಕಾರು ಆಟಿ ತಿಂಗಳ ಹಳೆ ಆಚರಣೆ ಮತ್ತು ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.

 ಮಾಜಿ ಅಧ್ಯಕ್ಷ ಹಾಲಿ ಗೌರವ ಸಲಹೆಗಾರ ಕೆ ಎನ್ ಪ್ರಕಾಶ್ ಭಂಡಾರಿ ಇವರು ಸಂಘದ ಸಾಧನೆ ಮತ್ತು ಭಂಡಾರಿ ಬಂಧುಗಳ ಮುಂದಿನ ಕಾರ್ಯ ಚಟುವಟಿಕೆಗಳಿಗೆಸ ಹಕಾರವನ್ನು ಯಾಚಿಸಿದರು.

 ಸಂಘದ ಗೌರವಾಧ್ಯಕ್ಷರಾದ ವಾಸುದೇವ ಭಂಡಾರಿ, ಸುಮಿತ್ರ ಭಂಡಾರಿ ಕಾನ ವಸಂತಿ ಜೆ ಭಂಡಾರಿ ಶಾಂತ ಕೆ ಭಂಡಾರಿ ಶಾಂತ ವಿ ಭಂಡಾರಿ ಸಾಣೂರು ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಉಜಿರೆ ಅವರು 60 ಬಗೆಯ ತುಳು ನಾಡಿನ ಖಾದ್ಯಗಳನ್ನು ಉದ್ಘಾಟಿಸಿದರು. 

ಆಟಿ ಕಳಂಜನ ಕುಣಿತ ಪಾರ್ದನ ಸಂದಿಯೊಂದಿಗಿನ ಸೊಗಡಿನೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ಭಂಡಾರಿ ಸಮುದಾಯದ ಕಲಾವಿದರ ತುಳು ಜಾನಪದ ನೃತ್ಯಗಳು ಬಹಳ ಸೊಗಸಾಗಿ ಮೂಡಿ ಬಂದವು.

 ಬಹಳ ಮುಖ್ಯವಾಗಿ ತುಳುನಾಡಿನ ಕೊಡಿ ಮರ್ಧ (46 ಬಗೆಯ ಔಷಧೀಯ ಸಸ್ಯಗಳನ್ನು) ಗುರುತಿಸುವ ಸ್ಪರ್ಧೆ, ತುಳು ನಾಡಿನ ಜಾನಪದ ನೃತ್ಯಗಳು ಸಹಿತ ವಿವಿಧ ಸ್ಪಧೆ೯ಗಳು ನಡೆದವು. 

    ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಸ್ವಾಗತಿಸಿದರು. ರೇಣುಕಾ ಭಂಡಾರಿ ಮತ್ತು ರೇಷ್ಮಾ ಭಂಡಾರಿ ಪ್ರಾರ್ಥಿಸಿದರು. ಪ್ರಶಾಂತ್ ಕೆ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀಧರ್ ಭಂಡಾರಿ ವಂದಿಸಿದರು.

Post a Comment

0 Comments

Advertisement