ಬ್ಯಾಗ್ ರಹಿತ ದಿನಕಲ್ಲಬೆಟ್ಟು ಶಾಲೆಯಲ್ಲಿ ಮಕ್ಕಳಿಗೆ ಜಾಗೃತಿ ಕಾಯ೯ಕ್ರಮ

ಬ್ಯಾಗ್ ರಹಿತ ದಿನ
ಕಲ್ಲಬೆಟ್ಟು ಶಾಲೆಯಲ್ಲಿ ಮಕ್ಕಳಿಗೆ ಜಾಗೃತಿ ಕಾಯ೯ಕ್ರಮ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಪಿ.ಎಮ್.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ಕಲ್ಲಬೆಟ್ಟು ಇಲ್ಲಿ ಬ್ಯಾಗ್ ರಹಿತ ದಿನವಾಗಿರುವ ಶನಿವಾರದಂದು ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ ಮತ್ತು ಮಾಧ್ಯಮ ಹಾಗೂ ಅಂತರ್ಜಾಲದ ಬಳಕೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾಯ೯ಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ  ಮೂಡುಬಿದಿರೆ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಪ್ರತಿಭಾ ಕೆ.ಸಿ. ಅವರು."ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲದ ಸರಿಯಾದ ಬಳಕೆ" ಬಗ್ಗೆ ಮಾಹಿತಿ ನೀಡಿ ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲವನ್ನು ಜವಾಬ್ದಾರಿಯುತವಾಗಿ ಹೇಗೆ ಬಳಸಬೇಕು ಮತ್ತು ಮಾದಕ ವಸ್ತುಗಳಂತಹ ದುರಭ್ಯಾಸಗಳಿಂದ ದೂರವಿದ್ದು  ಹೇಗೆ ತಮ್ಮ  ಭವಿಷ್ಯವನ್ನು ಉತ್ತಮವಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು  ವಿವರಿಸಿದರು.

ನಂತರ ವಿದ್ಯಾಥಿ೯ಗಳ ಜತೆ ಸಂವಾದ ನಡೆಸಿದರು. ತಮಗಿದ್ದ ಸಂಶಯಗಳ ಬಗ್ಗೆ ಕೇಳಿ ತಿಳಿದುಕೊಂಡರು.

ಪೂರ್ವ ಪ್ರಾಥಮಿಕ ವಿಭಾಗಕ್ಕೆ ಭೇಟಿ: ಅವರು ಶಾಲೆಯ ಪೂರ್ವ ಪ್ರಾಥಮಿಕ ( ವಿಭಾಗದ ಪುಟ್ಟ ಮಕ್ಕಳ ತರಗತಿಗಳಿಗೂ ಭೇಟಿ ನೀಡಿ, ಮಕ್ಕಳೊಂದಿಗೆ ಸಮಯ ಕಳೆದು ಪ್ರೋತ್ಸಾಹಿಸಿದರು.

 ಶಾಲೆಯ ಮುಖ್ಯ ಶಿಕ್ಷಕಿ ನಿಶಾ ಸ್ವಾಗತಿಸಿದರು. ಶಿಕ್ಷಕಿ ಡಯಾನ ವಂದಿಸಿದರು. 

 'ಬ್ಯಾಗ್ ರಹಿತ ದಿನ'ವು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಲ್ಲದೆ ಜೀವನಮೌಲ್ಯ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

Post a Comment

0 Comments

Advertisement