ಶ್ರೀ ಮಹಾವೀರ ಕಾಲೇಜಿನಲ್ಲಿ ವಿದ್ಯಾಥಿ೯ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ*ವಿದ್ಯಾಥಿ೯ಗಳಿಗೆ ಇನ್ ಸ್ಟಾ, ಫೇಸ್ ಬುಕ್ ಅಕೌಂಟ್ ಅಗತ್ಯವಿಲ್ಲ : ಎಸಿಪಿ ಶ್ರೀಕಾಂತ್

ಶ್ರೀ ಮಹಾವೀರ ಕಾಲೇಜಿನಲ್ಲಿ ವಿದ್ಯಾಥಿ೯ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

*ವಿದ್ಯಾಥಿ೯ಗಳಿಗೆ ಇನ್ ಸ್ಟಾ, ಫೇಸ್ ಬುಕ್ ಅಕೌಂಟ್ ಅಗತ್ಯವಿಲ್ಲ : ಎಸಿಪಿ ಶ್ರೀಕಾಂತ್

ಮೂಡುಬಿದಿರೆ : ಮನುಷ್ಯನಿಗೆ  ಶಿಕ್ಷಣ ದೊರೆತರೆ ಉತ್ತಮ ನಾಗರಿಕನಾಗಿ ದೇಶದ ಸಂಪತ್ತಾಗುತ್ತಾನೆ. ಆದರೆ ಇಂದಿನ ವಿದ್ಯಾಥಿ೯ಗಳು ಡ್ರಗ್ಸ್, ಸೋಶಿಯಲ್ ಮೀಡಿಯಾಗಳ ಹಿಂದೆ ಬಿದ್ದು ಮಿಸ್ ಯೂಸ್ ಆಗುತ್ತಿದ್ದಾರೆ ಆದ್ದರಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾಥಿ೯ಗಳಿಗೆ ಇನ್ ಸ್ಟಾ, ಫೇಸ್ ಬುಕ್ ಅಕೌಂಟ್ ಬೇಡ ಎಂದು ಪಣಂಬೂರು ಎಸಿಪಿ ಶ್ರೀಕಾಂತ್ ಹೇಳಿದರು. 

 ಅವರು ಶನಿವಾರ ಶ್ರೀ ಮಹಾವೀರ ಕಾಲೇಜಿನಲ್ಲಿ   "ವಿದ್ಯಾಥಿ೯ ಕ್ಷೇಮಪಾಲನಾ ಸಮಿತಿ 2026-27" ನ್ನು ಉದ್ಘಾಟಿಸಿ ಮಾತನಾಡಿದರು.

  ಸೋಶಿಯಲ್ ಮೀಡಿಯಾದಲ್ಲಿ ಯಾರೋ ಹಾಕುವ ಪೋಸ್ಟರ್ ಗಳನ್ನು ವಿದ್ಯಾಥಿ೯ಗಳು ಸರಿ-ತಪ್ಪುಗಳನ್ನು ಸರಿಯಾಗಿ ಗಮನಿಸದೆ ಲೈಕ್, ಕಮೆಂಟ್ ಗಳನ್ನು ಹಾಕುವುದರಿಂದ ಪೊಲೀಸ್ ಕೇಸ್ ಹಾಕುವ ಸಂದಭ೯ ಬರಬಹುದು ಇದರಿಂದಾಗಿ ಮುಂದೆ ನಿಮ್ಮ ಜೀವನಕ್ಕೆ ತೊಂದರೆಯಾಗಬಹುದು. ಹೆಣ್ಣು ಮಕ್ಕಳು ತಮ್ಮ ಫೋಟೋಗಳನ್ನು ಶೇರ್ ಮಾಡುವುದರಿಂದ ತೊಂದರೆಗೆ ಒಳಗಾಗಬಹುದು ಎಂದು ಎಚ್ಚರಿಸಿದರು.
 
ಇತ್ತೀಚಿನ ದಿನಗಳಲ್ಲಿ ವಿದ್ಯಾಥಿ೯ಗಳು ಮೊದಮೊದಲಿಗೆ ಮೋಜಿಗಾಗಿ ಮಾದಕ ವಸ್ತುಗಳ ರುಚಿ ನೋಡಿ  ನಂತರ ಅದಕ್ಕೆ ಬಲಿಯಾಗುತ್ತಿದ್ದಾರೆ. ಶಾಲಾ ಕಾಲೇಜುಗಳ ಆವರಣದಲ್ಲಿಯೇ ಡ್ರಗ್ಸ್  ಹಾವಳಿ ಹೆಚ್ಚಾಗುತ್ತಿದೆ ಎಂದು ತಿಳಿಸಿದ ಅವರು ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯವನ್ನು ನಿಮಾ೯ಣ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕಾಗಿದೆ ಎಂದರು. 

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಸಮಿತಿಯ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. 

ಮಂಗಳೂರು ಕೆಸಿಸಿಐನ ಅಧ್ಯಕ್ಷ ವಿದ್ಯಾಥಿ೯ಗಳು ಪಿ. ಬಿ. ಅಹಮ್ಮದ್ ಮುದಾಸಿರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಶೈಕ್ಷಣಿಕ ಸಾಧಕ ವಿದ್ಯಾಥಿ೯ಗಳನ್ನು ಗುರುತಿಸಿ ಗೌರವಿಸಲಾಯಿತು. 

ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ, ಪ. ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷೀ ಮಾಲ೯,  ಜತೆ ಕಾಯ೯ದಶಿ೯ ಅನ್ವಿತಾ ಉಪಸ್ಥಿತರಿದ್ದರು. 

ಬಾಲಕೃಷ್ಣ ಸ್ವಾಗತ,ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾಥಿ೯ ಕ್ಷೇಮಪಾಲನಾ ಸಂಘದ ನೂತನ ಅಧ್ಯಕ್ಷ ಕೀತ೯ನ್ ಸ್ವೀಕಾರ ಭಾಷಣಗೈದರು. ಉಪಾಧ್ಯಕ್ಷೆ ಗೀತಾ ಶೆಣೖ ಜತೆ ಕಾಯ೯ದಶಿ೯ ಶ್ರಾವ್ಯ ಅತಿಥಿಗಳನ್ನು ಪರಿಚಯಿಸಿದರು. ಹೆಚ್ ಒ ಡಿ ಸ್ವಣ೯ಲತಾ ಶೆಣೖ ಸಾಧಕ ವಿದ್ಯಾಥಿ೯ಗಳ ಪಟ್ಟಿ ವಾಚಿಸಿದರು.  ವಿದ್ಯಾಥಿ೯ನಿ ವನಿತಾ ಕಾಯ೯ಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ತನುಜಾ ವಂದಿಸಿದರು.

Post a Comment

0 Comments