ಕಲ್ಲಬೆಟ್ಟು ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲೋಗೋ ಬಿಡುಗಡೆ

ಕಲ್ಲಬೆಟ್ಟು ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲೋಗೋ ಬಿಡುಗಡೆ
ಮೂಡುಬಿದಿರೆ : ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು,ಕರಿಂಜೆ, ಮಾರೂರು  ಇದರ 25 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ  ಹಾಗೂ  ರಜತ ಸಂಭ್ರಮದ ಲೋಗೋವನ್ನು  ಎಂ. ಸಿ. ಎಸ್ ಬ್ಯಾಂಕ್ ನ  ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಂ ಅವರು ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಅಕ್ಷಯಧಾಮ ಸಭಾಭವನದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.

ಗಣೇಶ ಸೇವಾ  ಟ್ರಸ್ಟ್ ನ ಅಧ್ಯಕ್ಷರಾದ ಎಂ ಬಾಹುಬಲಿಪ್ರಸಾದ್, ಟ್ರಸ್ಟಿ ಶ್ರೀಪತಿ ಭಟ್ ಹಾಗೂ ಟ್ರಸ್ಟ್ ನ ಸದಸ್ಯರು , ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ  ರಾಜೇಶ್ ಬೈಲೂರು ಹಾಗೂ ಸದಸ್ಯರು , ಸ್ವರ್ಣ ಗೌರಿ ಮಾತೃಮಂಡಳಿಯ ಅಧ್ಯಕ್ಷೆ ಶಕುಂತಲಾ ರಾಮಚಂದ್ರ ರಾವ್ ಹಾಗೂ ಸದಸ್ಯರು  ಹಾಗೂ ಎಲ್ಲಾ ಕಾರ್ಯಕರ್ತರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.

Post a Comment

0 Comments