ಮೂಡುಬಿದಿರೆಯಲ್ಲಿ 35ನೇ ವಷ೯ದ ಮುದ್ದುಕೃಷ್ಣ ವೇಷ ಸ್ಪಧೆ೯

ಮೂಡುಬಿದಿರೆಯಲ್ಲಿ 35ನೇ ವಷ೯ದ ಮುದ್ದುಕೃಷ್ಣ ವೇಷ ಸ್ಪಧೆ೯ 

ಮೂಡುಬಿದಿರೆ : ಇಲ್ಲಿನ ಶ್ರೀ ಕೃಷ್ಣ ಫ್ರೆಂಡ್ಸ್ ಸಕ೯ಲ್ ವತಿಯಿಂದ ಸಮಾಜ ಮಂದಿರದಲ್ಲಿ ಭಾನುವಾರ  35ನೇ ವಷ೯ದ ಮುದ್ದು ಕೃಷ್ಣ ವೇಷ ಸ್ಪಧೆ೯ ನಡೆಯಿತು. 

ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವನ೯ರ್, ಉದ್ಯಮಿ ಶ್ರೀಕಾಂತ್ ಕಾಮತ್ ಸ್ಪಧೆ೯ಯನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕೃಷ್ಣ ವೇಷ ಸ್ಪಧೆ೯ಯು  ಕೇವಲ ಸ್ಪಧೆ೯ಯಾಗಿರದೆ  ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ,   ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಯಲು ಸಹಕಾರಿಯಾಗಿದೆ.   ಸ್ಪಧೆ೯ಯಲ್ಲಿ ಬಹುಮಾನ ಪಡೆಯುವುದಕ್ಕಿಂತಲೂ ಸ್ಪಧಿ೯ಸುವುದು ಮುಖ್ಯ ಎಂದು  ಹೇಳಿದರು. 
  
 ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ. ಮಾತನಾಡಿ ಶ್ರೀ ಕೃಷ್ಣ ಪರಮಾತ್ಮನನ್ನು ನಮಗೆ ಪ್ರತ್ಯಕ್ಷವಾಗಿ ಕಾಣಲು ಸಾಧ್ಯವಾಗದಿದ್ದರೂ ಮುದ್ದುಕೃಷ್ಣ ಸ್ಪಧೆ೯ಯ ಮೂಲಕ ಸಾಕ್ಷಾತ್ ಕೃಷ್ಣನ ದಶ೯ನವಾಗಿರುತ್ತದೆ. ಸ್ಪಧೆ೯ಗೆ ಮಾತ್ರ ಸೀಮಿತವಾಗದೆ ಕೃಷ್ಣನ ಜೀವನ ಮೌಲ್ಯಗಳನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕೆಂದರು. 
 
ಶ್ರೀ ಕೃಷ್ಣ ಫ್ರೆಂಡ್ಸ್ ಸಕ೯ಲ್ ನ ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂಜಿನಿಯರ್ ರಾಧಾಕೃಷ್ಣ ಬೋಕ೯ರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
 ಉಪಾಧ್ಯಕ್ಷ ಸುಶಾಂತ್ ಕಕೇ೯ರಾ ಸ್ವಾಗತಿಸಿದರು. ಶಿವಾನಂದ ಶಾಂತಿ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments