ಬನ್ನಡ್ಕ ಪಾಡ್ಯರ್ ಫ್ರೆಂಡ್ಸ್ ಆಶ್ರಯದಲ್ಲಿ 2 ನೇ ವರ್ಷದ ಕೆಸರ್ದ ಗೊಬ್ಬು

ಬನ್ನಡ್ಕ ಪಾಡ್ಯರ್ ಫ್ರೆಂಡ್ಸ್ ಆಶ್ರಯದಲ್ಲಿ 2 ನೇ ವರ್ಷದ ಕೆಸರ್ದ ಗೊಬ್ಬು
ಮೂಡುಬಿದಿರೆ : ಬನ್ನಡ್ಕ ಪಾಡ್ಯರ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ 2 ನೇ ವರ್ಷದ ಕೆಸರ್ದ ಗೊಬ್ಬು ಕಾರ್ಯಕ್ರಮವು ಪಾಡ್ಯರ್ ಪಣಿರಾಜ್ ಜೈನ್ ಅವರ ಬಾಕ್ಯಾರ್ ಗದ್ದೆಯಲ್ಲಿ ಭಾನುವಾರ ನಡೆಯಿತು. 
ಬನ್ನಡ್ಕ ದೈವಸ್ಥಾನದ ಮೊಕ್ತೇಶರ ಸುಕುಮಾರ್ ಬಲ್ಲಾಳ್ ಅವರು
 ಉದ್ಘಾಟಿಸಿ ಶುಭ ಹಾರೈಸಿದರು. 
 ಹಿರಿಯ ಕೃಷಿಕ ಜಗತ್ಪಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಯುವ ಪೀಳಿಗೆ ಕೃಷಿ ಯ ಬಗ್ಗೆ ಆಸಕ್ತಿ ಬೆಳೆಸಿದರೆ ಮುಂದಿನ ಪೀಳಿಗೆ ಕೃಷಿ ಭೂಮಿ ಉಳಿಯಬಹುದು.ನಮ್ಮ ತುಳುನಾಡಿನ ಮಣ್ಣಿಗೆ ನಮ್ಮ ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿರುವುದರಿಂದ ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು. ಕಾರ್ಯಕ್ರಮವನ್ನು 
ಎಲ್ಲಾ ವಯೋಮಾನದವರಿಗೆ ವಿವಿಧ ಕ್ರೀಡಾ ಸ್ಪಧೆ೯ಗಳು ನಡೆದವು. 
ಶ್ಯಾಮ್ ಭಟ್, ಸತೀಶ್ ಭಟ್, ವಸಂತ್ ಶೆಟ್ಟಿ ಪಾಡ್ಯರ್, ರಾಮಚಂದ್ರ ದೇವಾಡಿಗ, ಮಹೇಶ್ ಹುಲೇಕ್ಕರ್, ವಸಂತ್ ಪೂಜಾರಿ, ಜಗದೀಶ್ ಪೂಜಾರಿ ನಮಿರಾಜ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
 ಸಂತೋಷ್ ನಾಯ್ಕ್ ಸ್ವಾಗತಿಸಿದರು. 
ವಿಜೇತ ಕಾಮತ್, ಜಾಗ್ರತಿ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನೇಮಿರಾಜ್ ವಂದಿಸಿದರು.

Post a Comment

0 Comments