ಅಪರಿಚಿತ ವ್ಯಕ್ತಿಯ ಶವ ಪತ್ತೆ : ಮಾಹಿತಿಗೆ ಪೊಲೀಸರಿಂದ ಮನವಿ

ಅಪರಿಚಿತ ವ್ಯಕ್ತಿಯ ಶವ ಪತ್ತೆ : ಮಾಹಿತಿಗೆ ಪೊಲೀಸರಿಂದ ಮನವಿ
ಮೂಡುಬಿದಿರೆ : ಕಳೆದ ಒoದು ವಾರಗಳ ಹಿಂದೆ ಎಲ್ಲಿಂದಲೋ ಮೂಡುಬಿದಿರೆಗೆ ಬಂದು ಭಿಕ್ಷೆ ಬೇಡಿಕೊಂಡು ರಾತ್ರಿ ಸಮಯ ಬಸ್ಸು ನಿಲ್ದಾಣ, ದೇವಸ್ಥಾನ ಹಾಗೂ ಇತರೆ ಕಡೆಗಳಲ್ಲಿ ಮಲಗುತ್ತಿದ್ದ 50ರಿಂದ 65 ವಷ೯ದೊಳಗಿನ ವೃದ್ಧರೋವ೯ರು ಗುರುವಾರ ಮಾಸ್ತಿಕಟ್ಟೆಗೆ ಹೋಗುವ ರಸ್ತೆಯ ಬಸ್ ತಂಗುದಾಣದಲ್ಲಿ ಮೃತಪಟ್ಟಿದ್ದು ವ್ಯಕ್ತಿಯ ಹೆಸರು, ವಿಳಾಸ, ಅವರ ಸಂಬಂಧಿಕರ/ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ. 

ಮೃತ ದೇಹವನ್ನು ಜಿಲ್ಲಾ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಶಿಥಲೀಕರಣದಲ್ಲಿ ಇರಿಸಲಾಗಿದೆ. ಮೃತರ ಇರುವಿಕೆಯ ಬಗ್ಗೆ ಮತ್ತು ಅವರ ಸಂಬಂಧಿಕರ ಬಗ್ಗೆ ಮಾಹಿತಿ ದೊರೆತಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಅಥವಾ ಮಂಗಳೂರು ನಗರ ಕಂಟ್ರೋಲ್ ಕೋಣೆಗೆ ಮಾಹಿತಿ ತಿಳಿಸಲು ಕೋರಲಾಗಿದೆ.

5.10 ಎತ್ತರ,
ಗೋಧಿ ಮೈಬಣ್ಣ, ಕೋಲು ಮುಖ, ಬಿಳಿ ಬಣ್ಣದ ಉದ್ದ ತಲೆಕೂದಲು, ಬಿಳಿ ಬಣ್ಣದ ದಪ್ಪ ಗಡ್ಡ ಹಾಗೂ ಮೀಸೆಯನ್ನು ಹೊಂದಿರುತ್ತಾರೆ.
ಧರಿಸಿರುವ ಬಟ್ಟೆ ಬರೆಗಳು ಕ್ರೀಮ್ ಬಣ್ಣದ ನೀಲಿ ಗೆರೆಗಳುಳ್ಳ ಚೆಕ್ಸ್ ತುಂಬು ತೋಳಿನ ಶಟ್೯, ಬಿಳಿ ಕಂದು ಗೆರೆಗಳುಳ್ಳ ಕಪ್ಪು ಬಣ್ಣದ ಅಲ್ಲಲ್ಲಿ ಹೂವಿನ ಚಿತ್ರವಿರುವ లుంగిಯನ್ನು ಧರಿಸಿದ್ದಾರೆ.

Post a Comment

0 Comments

Advertisement