ಅಂಕ ಗಳಿಕೆಗಿಂತ ಜೀವನ ಮೌಲ್ಯ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಿ.: ವಿವೇಕ ಚೈತನ್ಯಾನಂದ ಮಹಾರಾಜ್

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಅಂಕ ಗಳಿಕೆಗಿಂತ ಜೀವನ ಮೌಲ್ಯ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಿ.: ವಿವೇಕ ಚೈತನ್ಯಾನಂದ ಮಹಾರಾಜ್
 
ಮೂಡುಬಿದಿರೆ : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಪಡೆದುಕೊಂಡು ಸಮಾಜಕ್ಕೆ ಆದರ್ಶರಾಗಿ ಬಾಳಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೇತಾನ್ಯಾನಂದ ಮಹಾರಾಜ್ ನುಡಿದರು. 

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿನ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ಒದಗಿಸಲಾದ ಶಾಲಾ ಬ್ಯಾಗ್, ಬರವಣಿಗೆ ಸಾಮಗ್ರಿಗಳು, ನೋಟ್ ಪುಸ್ತಕ, ಕೊಡೆ ಊಟದ ತಟ್ಟೆ, ಲೋಟ ನೀರಿನ ಬಾಟಲ್ ಮತ್ತು ಎಕ್ಸಾಮ್ ಪ್ಯಾಡ್ ಮುಂತಾದವುಗಳನ್ನು ಶುಕ್ರವಾರ ವಿತರಿಸಿ ಮಾತನಾಡಿದರು. 

 ದಾನಿಗಳಾಗಿರುವ ಧೀರಜ್ ಶೆಣೈ , ಸುರೇಂದ್ರ ಭಂಡಾರ್ಕರ್, ಗೀತಾ ಉಮೇಶ್ ಕಿಣಿ, ಆಶಾಪುರ್ ಸ್ಟೇಷನರಿ, ಗೌತಮಿ ಪೈ ಮುಂತಾದವರನ್ನು ಅಭಿನಂದಿಸಲಾಯಿತು. 

ದಾನಿಗಳಾದ ದಯಾನಂದ ಪೈ, ಹೋಟೆಲ್ ಉದ್ಯಮಿ ಅರುಣ್ ಕುಮಾರ್, ಮಯೂರಿ ಟೆಕ್ಸ್ಟೈಲ್ ಪರವಾಗಿ ಕೃಷ್ಣಾನಂದ ಪ್ರಭು, ಪ್ರಜ್ವಲ್ ಶೆಣೈ, ಪ್ರಸನ್ನ ಶೆಣೈ ಎಸ್ ಡಿ.ಎಂ.ಸಿ ಅಧ್ಯಕ್ಷ ರಮೇಶ್ ಆಚಾರ್ಯ,ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್ ನಾಗೇಶ್, ಸ್ಥಳೀಯರಾದ ವಿಶ್ವನಾಥ ಕಾಮತ್ ಉಪಸ್ಥಿತರಿದ್ದರು. 

ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಕಾಯ೯ಕ್ರಮ ನಿರೂಪಿಸಿದರು. ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು.ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಸಹಕರಿಸಿದರು.

Post a Comment

0 Comments

Advertisement