ಉಡುಪಿ: ದೋಣಿಗಳು ಮತ್ತು ಮೀನುಗಾರಿಕಾ ನೌಕೆಗಳ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುವ ಪರಿಸ್ಥಿತಿಯಲ್ಲಿ ನದಿ ಮುಖದಲ್ಲಿ ತುಂಬಿರುವ ಮರಳಿನ ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ಸಹಮತ ವ್ಯಕ್ತಪಡಿಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಮೀಕ್ಷೆ ರಾಜ್ಯ ಸಚಿವ ಶ್ರೀ ಕೀರ್ತಿವರ್ದನ್ ಸಿಂಗ್ ಉತ್ತರಿಸಿ ಸಿ.ಅರ್.ಜೆಡ್ ಅಧಿಸೂಚನೆ 2019 ರ ಅಡಿಯಲ್ಲಿ ಪೂರ್ವಭಾವಿ ಅನುಮತಿ ಪಡೆಯುವ ಷರತ್ತಿಗೆ ಒಳಪಟ್ಟು ಸಿ.ಆರ್.ಝೆಡ್ I.B- CRZ-ll ಮತ್ತು CRZ- IV ಪ್ರದೇಶಗಳ ಮರಳಿನ ದಿಬ್ಬಗಳನ್ನು ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ 24.11.2022 ರ ತಿದ್ದುಪಡಿ ಅಧಿಸೂಚನೆ ಸಂಖ್ಯೆ 5495E CRZ ಅಧಿಸೂಚನೆಯಂತೆ ದ್ವೀಪ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2019 ರ ಅಡಿಯಲ್ಲಿಯೂ ಯಾಂತ್ರಿಕವಲ್ಲದ ಸಾಂಪ್ರದಾಯಿಕ, ಯಾಂತ್ರಿಕವಲ್ಲದ ಕೈ ಕೆಲಸದ ವಿಧಾನಗಳ ಮೂಲಕ ಮರಳಿನ ದಿಬ್ಬಗಳನ್ನು ತೆಗೆಯಲು ಸಚಿವಾಲಯ ಅನುಮತಿ ನೀಡಿದೆ. ಆಯಾಯ ರಾಜ್ಯ ಸರಕಾರಗಳು ಕೈಯಿಂದ ಮರಳು ತೆಗೆಯಲುಅನುಮತಿ ಪಡೆದ ಸಮುದಾಯದ ವ್ಯಕ್ತಿಗಳ ನೊಂದಣಿ ಮತ್ತು ಅದನ್ನು ವಾರ್ಷಿಕವಾಗಿ ನವೀಕರಿಸುವ ಷರತ್ತಿಗೊಳಪಟ್ಟು ನಿರ್ದಿಷ್ಟ ಪ್ರದೇಶದಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ಮರಳು ತೆಗೆಯಲು ಅನುಮತಿ ನೀಡಬಹುದು ಎಂದು ಲಿಖಿತವಾಗಿ ಹೇಳಿದ್ದಾರೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದ ಸಿ.ಆರ್.ಝೆಡ್ ಮರಳು ತೆಗೆಯುವ ಚರ್ಚೆಗೆ ಕೇಂದ್ರ ಸರಕಾರ ಮಹತ್ವದ ಉತ್ತರ ಕೊಟ್ಟಂತಾಗಿದೆ.


0 Comments