ಮೂಡುಬಿದಿರೆ : ಯಕ್ಷದೇಗುಲ ಕಾಂತಾವರ ಇದರ ಇಪ್ಪತ್ನಾಲ್ಕನೇ ವಾರ್ಷಿಕ ಕಾರ್ಯಕ್ರಮವು ಜು. 26ರಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಬೆಳಿಗ್ಗೆ 10.00 ರಿಂದ ಹನ್ನೆರಡು ತಾಸಿನ "ಯಕ್ಷೋಲ್ಲಾಸ 2026"
ಜರಗಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಾರಾಡಿಬೀಡು ಸುಮತಿ ಆರ್ ಬಲ್ಲಾಳ್ ಅವರು ಉದ್ಘಾಟಿಸಲಿದ್ದಾರೆ. ಕಾಂತಾವರ ಯುವಸಂಗಮದ ಅಧ್ಯಕ್ಷ ವಿಜಯ ಸಾಲ್ಯಾನ್, ಬೇಲಾಡಿ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಕುಲಾಲ್, ಕೇಮಾರ್ ಯುವ ಉತ್ಸಾಹಿ ಬಳಗದ ಅದ್ಯಕ್ಷ ಚಂದ್ರಹಾಸ ಜೈನ್ ಅವರ ಉಪಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನರ್ಚಕ ಕೃಷ್ಣ ಮೂರ್ತಿ ಭಟ್ ಶುಭಾಶಂಸನೆ ಗೈವರು.
ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ ಯಕ್ಷಗಾನ ನಡೆಯಲಿದೆ.
ಅಪರಾಹ್ನ 2.00 ರಿಂದ ಡಾ.ಜೀವಂಧರ್ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ಉದ್ಯಮಿ ಕೆ ಶ್ರೀಪತಿ ಭಟ್ ಮತ್ತು ಕಾರ್ಕಳದ ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಗೌರವ ಉಪಸ್ಥಿತಿಯಲ್ಲಿ ಪುತ್ತೂರು ದಿ.ಶ್ರೀಧರ ಭಂಡಾರಿ ಸ್ಮರಣಾರ್ಥ ಪೂಕಳ ಲಕ್ಷ್ಮೀನಾರಾಯಣ ಭಟ್ ಹಾಗೂ ಬಾಯಾರು ದಿ.ಪ್ರಕಾಶ್ ಚಂದ್ರ ರಾವ್ ಸ್ಮರಣಾರ್ಥ ಬಾಯಾರು ರಮೇಶ್ ಶೆಟ್ಟಿ ಅವರಿಗೆ "ಯಕ್ಷದೇಗುಲ ಪ್ರಶಸ್ತಿ" ಪ್ರಧಾನ ಸಮಾರಂಭ ಜರಗಲಿದೆ.
ಬಾರಾಡಿ ಫ್ರೆಂಡ್ಸ್ ನ ಅದ್ಯಕ್ಷ ಸನತ್ ಕುಮಾರ್, ಕಾಂತಾವರ ಗೆಳೆಯರ ಬಳಗದ ಅದ್ಯಕ್ಷ ಆಶಿಕ್ ಸಾಲ್ಯಾನ್ ಉಪಸ್ಥಿತರಿರುವರು. ನಂತರ ಪ್ರಸಿದ್ಧ ಕಲಾವಿದರಿಂದ ಸುಧನ್ವಾರ್ಜುನ ತಾಳಮದ್ದಳೆ ಹಾಗೂ ಕಾಂತಾವರ ಯಕ್ಷಬಾಲಕರಿಂದ ಮತ್ಸ್ಯಾವತಾರ, ವರಾಹವತಾರ, ಮಾರಣಾದ್ವರ ಬಯಲಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.


0 Comments