ರಂಗಕರ್ಮಿ ಪರಮಾನಂದ ವಿ.ಸಾಲ್ಯಾನ್ ಸಸಿಹಿತ್ಲು ನಿಧನ

ರಂಗಕರ್ಮಿ ಪರಮಾನಂದ ವಿ.ಸಾಲ್ಯಾನ್ ಸಸಿಹಿತ್ಲು ನಿಧನ

ಮೂಡುಬಿದಿರೆ : ರಂಗಕರ್ಮಿ, ಸಾಹಿತಿ, ಲೇಖಕ ಹಾಗೂ ಪತ್ರಕರ್ತ ಪರಮಾನಂದ ವಿ.ಸಾಲ್ಯಾನ್ ಸಸಿಹಿತ್ಲು (65) ಅವರು ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. 

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು. ಹಲವಾರು ನಾಟಕಗಳನ್ನೂ ನಿರ್ದೇಶನ ಮಾಡಿದ್ದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಸಮಿತಿಯಲ್ಲಿಯೂ ಸಕ್ರಿಯರಾಗಿದ್ದರು. ರಂಗಸುದರ್ಶನ ಸಸಿಹಿತ್ಲು ಇದರ ಸ್ಥಾಪಕಾಧ್ಯಕ್ಷರಾಗಿದ್ದರು. ಅಜೇಯ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಮುಂಗಾರು, ಹೊಸದಿಗಂತ ಸಹಿತ ಹಲವು ಪತ್ರಿಕೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುಂಬಯಿ ಸಹಿತ ವಿವಿಧ ಸಂಘ- ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. 

ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. 

ಮೃತರ ಅಂತಿಮ ದರ್ಶನ ಜು.13 ರಂದು ಸಂಜೆ 4 ಗಂಟೆಗೆ ಸಸಿಹಿತ್ಲುವಿನ ಸ್ವಗೃಹದಲ್ಲಿ ನಡೆಯಲಿದೆ.

Post a Comment

0 Comments