ಹೊಸಬೆಟ್ಟು ಗ್ರಾಮ ಪಂಚಾಯತ್ ಸಿಬಂದಿ ಸಂಜೀವ ನಾಯ್ಕರಿಗೆ ಬೀಳ್ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment
ಹೊಸಬೆಟ್ಟು ಗ್ರಾಮ ಪಂಚಾಯತ್ ಸಿಬಂದಿ ಸಂಜೀವ ನಾಯ್ಕರಿಗೆ ಬೀಳ್ಕೊಡುಗೆ
ಮೂಡುಬಿದಿರೆ: ಹೊಸಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕಳೆದ 24 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಂಜೀವ ನಾಯ್ಕ ಇರುವೈಲು ಅವರಿಗೆ ಬೀಳ್ಕೊಡುವ ಸಮಾರಂಭ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಪಶು ವೈದ್ಯಕೀಯ ಇಲಾಖೆಯ ಆಡಳಿತ ನಿರ್ದೇಶಕ ಗುರುರಾಜ್ ಅಧ್ಯಕ್ಷತೆ ವಹಿಸಿದ್ದರು. 

ಇರುವೈಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಆಸ್ರಣ್ಣ ಆಶೀರ್ವಚನ ನೀಡಿದರು.

ತಾಲೂಕು ಪಂಚಾಯತ್ ಆಡಳಿತ ನಿರ್ದೇಶಕ ಸಾಯೀಶ ಚೌಟ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ರೀಟಾ ಕುಟಿನ್ಹಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಲೇರಿಯನ್ ಕುಟಿನ್ಹೋ, ಮೀನಾಕ್ಷಿ, ಸೌಮ್ಯಾ, ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾದ ವಿಲ್ಫ್ರೆಡ್ ಮೆಂಡೋನ್ಸಾ, ರೊನಾಲ್ಡ್ ಸೆರಾವೊ, ಯೋಗೀಶ ಶೆಟ್ಟಿ, ಮರೀನಾ ಮೆಂಡೋನ್ಸಾ, ಸಚೀಂದ್ರ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಕುಮಾರಿ, ಗ್ರಾಮ ಸಹಾಯಕ ಶೀನ, ಪಂಚಾಯಿತಿ ಸಿಬ್ಬಂದಿಗಳಾದ ಶಾರದಾ, ಗಣೇಶ್, ಪ್ರೇಮಾ, ಹರಿಣಾಕ್ಷಿ, ವನಿತಾ ಹಾಗೂ ಇತರರು ಸಮಾರಂಭದಲ್ಲಿ ಭಾಗವಹಿಸಿ ಸಂಜೀವ ನಾಯ್ಕ ಅವರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

Post a Comment

0 Comments