ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಗೆ ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಸುಮಾರು ರೂಪಾಯಿ 40000 ಮೌಲ್ಯದ ಪ್ರೋಜೆಕ್ಟರ್ ನ್ನು ಕೊಡುಗೆಯಾಗಿ ನೀಡಲಾಯಿತು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವತ್ಸಲಾ ರಾಜೇಶ್ ರವರು ಪ್ರೇರಣಾ ಶಾಲೆಯ ಪರವಾಗಿ ಈ ಕೊಡುಗೆಯನ್ನು ಸ್ವೀಕರಿಸಿದರು . ರೋಟರಿ ಕ್ಲಬ್ ಮೂಡುಬಿದಿರೆಯ ಅಧ್ಯಕ್ಷರಾದ ರೊ.ನಾಗರಾಜ ಹೆಗ್ಡೆಯವರು ಪ್ರೋಜೆಕ್ಟರ್ ನ ಬಟನ್ ಒತ್ತುವ ಮೂಲಕ ಶಾಲೆಗೆ ಹಸ್ತಾಂತರಿಸಿದರು .
ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ರೊ.ನಾಗರಾಜ ಹೆಗ್ಡೆಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ , " ರೋಟರಿ ಕ್ಲಬ್ ಸದಾ ಜನೋಪಯೋಗಿ ಕಾರ್ಯಕ್ರಮ ನಡೆಸುತ್ತಾ ಬಂದಿದೆ . ಇದೀಗ ಪ್ರೇರಣಾ ಶಾಲೆಯ ಸುಮಾರು 325+ ವಿದ್ಯಾರ್ಥಿಗಳಿಗೆ ಈ ನೂತನ ಪ್ರೋಜೆಕ್ಟರ್ ನ ಸೌಲಭ್ಯ ಒದಗಿಸುವ ಮೂಲಕ ಸಾರ್ಥಕ ಸೇವೆ ಮಾಡಿದ ತೃಪ್ತಿ ನೀಡಿದೆ " ಎಂದು ನುಡಿದರು .
ರೋಟರಿ ವಲಯ - 4 ರ ಅಸಿಸ್ಟೆಂಟ್ ಗವರ್ನರ್ ರೊ.ಉಮೇಶ್ ರಾವ್ ,C.A .ರವರು , " ಇಂದಿನ ಶಿಕ್ಷಣ ಪದ್ಧತಿಗೆ ವಿದ್ಯಾರ್ಥಿಗಳಿಗೆ ಪ್ರೋಜೆಕ್ಟರ್ ನ ಅವಶ್ಯಕತೆ ಇದ್ದು , ಅದನ್ನು ಮನಗಂಡು ಈ ಸತ್ಕಾರ್ಯ ಮಾಡಿರುವುದು ಉಲ್ಲೇಖನೀಯ " ಎಂದರು . ರೋಟರಿ ಕ್ಲಬ್ ಮೂಡುಬಿದಿರೆಯ ಕಾರ್ಯದರ್ಶಿ ರೊ .ಪವನ್ ಪೈಯವರು ಉಪಸ್ಥಿತರಿದ್ದು ಶುಭ ಹಾರೈಸಿದರು .
ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ( ರಿ ) ಮೂಡುಬಿದಿರೆ ಇದರ ಅಧ್ಯಕ್ಷ ಶ್ರೀ ರಾಜೇಶ್ ಬಂಗೇರಾರವರು ಸ್ವಾಗತಿಸಿದರು . ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು .ಸೇವಾಂಜಲಿಯ ಕೋಶಾಧಿಕಾರಿ ಶ್ರೀ. ಎಸ್. ಎನ್. ಬೋರ್ಕರ್, ಟ್ರಸ್ಟಿಗಳಾದ ಶ್ರೀ ಮಂಜುನಾಥ್ ಶೆಟ್ಟಿ , ಡಾ. ಆನಂದ ಕಾರ್ಲ , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವತ್ಸಲಾ ರಾಜೇಶ್ , ಶಿಕ್ಷಕಿಯರಾದ ಶ್ರೀಮತಿ ಹರ್ಷಿತಾ , ಶ್ರೀಮತಿ ಶಶಿಕಲಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


0 Comments