ಮೂಡುಬಿದಿರೆ: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸೋಮವಾರ ಸಾವಿರ ಕಂಬ ಬಸದಿ ಹಾಗೂ ಜೈನ ಮಠಕ್ಕೆ ಭೇಟಿ ನೀಡಿ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
15ನೇ ಶತಮಾನದಲ್ಲಿ ವಿದೇಶಿ ಆಕ್ರಮಣಗಳನ್ನು ದಿಟ್ಟತನದಿಂದ ಎದುರಿಸಿದ ಹಾಗೂ ಕರಿಮೆಣಸಿನ ರಾಣಿಎಂದು ಖ್ಯಾತಿ ಪಡೆದಿದ್ದ ಚೆನ್ನಭೈರಾದೇವಿ ಅವರ ಜೀವನಗಾಥೆಯನ್ನು ತಾವು ಅಧ್ಯಯನ ಮಾಡಿರುವುದಾಗಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ರಾಷ್ಟ್ರಪ್ರೇಮ ಮತ್ತು ಇತಿಹಾಸದ ಅರಿವು ಮೂಡಿಸುವಂತಹ ಐತಿಹಾಸಿಕ ಚಲನಚಿತ್ರವೊಂದನ್ನು ಈ ಕಥೆಯನ್ನು ಆಧರಿಸಿ ನಿರ್ದೇಶಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು.
ಸ್ವಾಮೀಜಿಯವರು ರಾಜೇಂದ್ರ ಸಿಂಗ್ ಬಾಬು ಅವರನ್ನು ಗೌರವಿಸಿದರು.ಶಿಕ್ಷಕ ಲೋಕರಾಜ್, ಕಲಾವಿದ ಚಿತ್ತ ಜಿನೇಂದ್ರ, ವಕೀಲೆ ಶ್ವೇತಾ ಜೈನ್, ಪ್ರವೀಣ್ ಬೆಂಗಳೂರು ಉಪಸ್ಥಿತರಿದ್ದರು.


0 Comments