ಅಸಹಾಯಕ ಕುಟುಂಬಕ್ಕೆ ಸೂರು ನಿಮಿ೯ಸಿ ಆಸರೆಮಾನವೀಯತೆ ಮೆರೆದ ಪಂಚಾಯತ್ ಮಾಜಿ ಸದಸ್ಯ

ಜಾಹೀರಾತು/Advertisment
ಜಾಹೀರಾತು/Advertisment
ಅಸಹಾಯಕ ಕುಟುಂಬಕ್ಕೆ ಸೂರು ನಿಮಿ೯ಸಿ ಆಸರೆ
ಮಾನವೀಯತೆ ಮೆರೆದ ಪಂಚಾಯತ್ ಮಾಜಿ ಸದಸ್ಯ 
ಮೂಡುಬಿದಿರೆ ತಾಲೂಕಿನ ಶಿತಾ೯ಡಿ ಗ್ರಾಮ ಪಂಚಾಯತ್ ಸದಸ್ಯರೋವ೯ರು ಅಸಹಾಯಕ ಕುಟುಂಬಕ್ಕೆ ಸೂರೊಂದನ್ನು ನಿಮಿ೯ಸಿ ಕೊಟ್ಟು ಆಸರೆಯಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಶಿತಾ೯ಡಿಯಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿರುವ ಸಚ್ಚು ಯಾನೆ ಸತೀಶ್ ಪೂಜಾರಿ ಅವರೇ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಬಳಿಯ ಕಂಬಲ್ದೋಡಿ ದರ್ಖಾಸು ಮನೆಯ ಕುಸುಮಾ ಆಚಾರ್ಯ ಎಂಬವರ ಬಡಕುಟುಂಬಕ್ಕೆ ಮನೆ ನಿಮಿ೯ಸಿ ಆಸರೆಯಾದ ಪುಣ್ಯಾತ್ಮ. 

ಕುಸುಮಾ ಅವರ ಪತಿ ಸಾಮ್ರಾಯ ಆಚಾರ್ಯ ಅವರು ನಿಧನರಾದ ಬಳಿಕ ಅವರ ಮಗ ಉಮೇಶ ಆ ಮನೆಯ ಯಜಮಾನನಾಗಿದ್ದ.ಇನ್ನೊಬ್ಬ ಮಗ ಯುವರಾಜ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾತ ಸಣ್ಣ ಪ್ರಾಯದಲ್ಲೇ ಮೃತಪಟ್ಟ. ಉಮೇಶನೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಬಳಿಕ ಮನೆಯ ಜವಾಬ್ದಾರಿ ಎಲ್ಲಾ ಆತನ ಪತ್ನಿ ಕುಸುಮಾ ಆಚಾರ್ಯ ಅವರ ಮೇಲೆ ಬಿತ್ತು. ಮಗ ವಿದ್ಯಾನಂದ ಸಣ್ಣವನು, ನಾದಿನಿ ವಿಮಲಾ ಶಿರ್ತಾಡಿ ಆಸುಪಾಸಿನ ಮನೆಗಳಿಗೆ, ಅಂಗಡಿ,ಹೊಟೇಲ್ ಗಳಿಗೆ ಎಂದು ಸಣ್ಣ ಪ್ರಾಯದಲ್ಲೇ ಕೆಲಸಕ್ಕೆ ಹೋಗಿ ಜೀವನಕ್ಕೊಂದು ದಾರಿ ಕಂಡು ಕೊಂಡಿದ್ದರು.
ಮಗ ವಿದ್ಯಾನಂದ ವಿದ್ಯಾಭ್ಯಾಸ ಮುಂದುವರಿಸಲಾಗದೆ ಹೊಟೇಲ್ ಸೇರಿಕೊಂಡ‌. ಮನೆಯಲ್ಲಿ ಯಾರೂ ಇಲ್ಲದೆ ಏಕಾಂಗಿಯಾಗಿದ್ದ ಕುಸುಮಾ ಮಂಕಾಗುತ್ತಾ ಹೋದರು
 ಹಳೆಯದಾದ ಮನೆ ಯಾವ ಸೌಕರ್ಯಗಳೂ ಇಲ್ಲದೆ ಎರಡು ವಷ೯ಗಳ ಹಿಂದೆ ಮಳೆಗಾಲದಲ್ಲಿ ಬಿದ್ದು ಹೋಯಿತು‌.
ಆದರೂ ಈ ಕುಟುಂಬ ಅದೇ ಮನೆಯಲ್ಲಿ ವಾಸವಾಗಿತ್ತು.ಇವರ ಅಸಹಾಯಕತೆ, ಮಳೆಗಾಲದಲ್ಲಿ ವಾಸವಾಗಲು ಅಸಾಧ್ಯವಾದಾಗ ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಪಂಚಾಯತ್ ನವರು ಇವರನ್ನು ಗಂಜಿಕೇಂದ್ರಕ್ಕೆ ಶಿಫ್ಟ್ ಮಾಡಿದರು. ಮಳೆಗಾಲ ಕಳೆದ ಕೂಡಲೇ ಮತ್ತೆ ಅದೇ ಬಿದ್ದು ಹೋಗಿ ಅಲ್ಪ ಸ್ವಲ್ಪ ಉಳಿದ ಮನೆಗೆ ಬಂದು ವಾಸವಿದ್ದರು.
ಈ ಬಡ ಕುಟುಂಬದ ಅಸಹಾಯಕತೆಯನ್ನು ಅದೇ ಪರಿಸರದ ಸತೀಶ್ ಪೂಜಾರಿ ಗಮನಿಸುತ್ತಲೇ ಇದ್ದರು.
ಈ ಅಸಹಾಯಕ ಕುಟುಂಬಕ್ಕೆ ಸೂರೊಂದನ್ನು ನಿಮಿ೯ಸಿಕೊಡಬೇಕೆಂಬ ಛಲವನ್ನು ತೊಟ್ಟರು.
ನೆರೆ ಪರಿಹಾರದಲ್ಲಿ ಆ ಮನೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂ.ನ್ನು ಮಂಜೂರುಗೊಳಿಸುವಲ್ಲಿ ಯಶಸ್ವಿಯಾದರು.
ಆ ಮನೆಗೆ ಹೋಗಲು ಸರಿಯಾದ ದಾರಿ ಇರಲಿಲ್ಲ.ಅಲ್ಲಿಗೊಂದು ದಾರಿ ಸಿಗಬೇಕಾದರೆ ಅದು ಖಾಸಗಿ ಜಾಗವಾಗಿತ್ತು.ಜಾಗದ ಮಾಲಕರಾದ ಕಂಬಲ್ದೋಡಿ ಜಿನ್ನಮ್ಮ ಬಾಬು ಪೂಜಾರಿ ಕುಟುಂಬದ ಮನವೊಲಿಸಿ ಅವರು ಕೂಡಾ ಈ ಬಡ ಕುಟುಂಬದ ಮೇಲೆ ಕರುಣೆ ತೋರಿ ಜಾಗ ಬಿಟ್ಟು ಕೊಟ್ಟಿರುವುದರಿಂದ ಮನೆಗೊಂದು ದಾರಿಯಾಯಿತು.
ನೆರೆ ಪರಿಹಾರದಿಂದ ಸಿಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರ ಮತ್ತು ಉಳಿದ ಖರ್ಚಿಗೆ ಕೆಲವು ದಾನಿಗಳು ಸಹಕರಿಸಿದ್ದಾರೆ. 
 ಈ ವರ್ಷದ ಮಳೆಗಾಲದಲ್ಲಿ ಆ ಕುಟುಂಬ ಹೊಸಮನೆಯಲ್ಲಿ ವಾಸವಾಗಲೇಬೇಕೆಂಬ ನಿಟ್ಟಿನಲ್ಲಿ ಮನೆ ಕೆಲಸಕ್ಕಿಳಿದ ಸಚ್ಚು ಅದನ್ನು ಪೂಣ೯ಗೊಳಿಸಿ ಆ ಬಡ ಕುಟುಂಬದ ಬದುಕಿಗೆ ಆಸರೆಯಾಗಿದ್ದಾರೆ.
ಇನ್ನೂ ಹೆಚ್ಚಿನ ವ್ಯವಸ್ಥೆಗಳು ಆಗಬೇಕಾಗಿದೆ. ದಾನಿಗಳಿದ್ದರೆ ನೇರವಾಗಿ ಭೇಟಿ ಕೊಟ್ಟು ಪರಿಶೀಲಿಸಬಹುದು ಅಥವಾ ಸಚ್ಚು ( 9845617518) ಅವರನ್ನು ಸಂಪರ್ಕಿಸಬಹುದಾಗಿದೆ.

Post a Comment

0 Comments