ಮೂಡುಬಿದಿರೆ: ಶ್ರುತ ಪಂಚಮಿ ಅಂಗವಾಗಿ ಜೈನ ಕಾಶಿ ಮೂಡುಬಿದಿರೆಯ ಜೈನ ಮಠದಲ್ಲಿ ಶ್ರುತ ಸ್ಕಂದ ಆರಾಧನೆ ನಡೆಯಿತು.

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ: ಶ್ರುತ ಪಂಚಮಿ ಅಂಗವಾಗಿ ಜೈನ ಕಾಶಿ ಮೂಡುಬಿದಿರೆಯ ಜೈನ ಮಠದಲ್ಲಿ ಶ್ರುತ ಸ್ಕಂದ ಆರಾಧನೆ ನಡೆಯಿತು.

ಭಗವಾನ್ ಪಾರ್ಶ್ವನಾಥ ಸ್ವಾಮಿ, ಸರಸ್ವತಿ ಜಿನವಾಣಿ, ದ್ವಾದಶಾಂಗ ಜಿನವಾಣಿ ಹಾಗೂ ಗಣಧರ ಪೂಜೆ, ಅಭಿಷೇಕ ಆರಾಧನೆ ಕಾರ್ಯಕ್ರಮಗಳು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದವು. 


ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ರಶ್ಮಿತಾ ಪೂಜಾ ಸೇವೆ ಸಲ್ಲಿಸಿದರು. ಬಳಿಕ ದಂಪತಿಯನ್ನು ಸ್ವಾಮೀಜಿ ಗೌರವಿಸಿದರು.



ಆಶೀರ್ವಚನ ನೀಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನ ಧರ್ಮದ ಪರಮ ಪವಿತ್ರ ವೇದಗಳಾದ ಷಟ್ಖಂಡಾಗಮ, ಧವಲತ್ರಯ ಸೇರಿದಂತೆ ಆಗಮ ಗ್ರಂಥಗಳು ಲಿಪಿಬದ್ಧಗೊಂಡ ದಿನವನ್ನು ಶ್ರುತ ಪಂಚಮಿಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.


ವೃಂದ ರಾಜೇಂದ್ರ, ವೀಣಾ ರಘುಚಂದ್ರ, ಮಂಜುಳಾ ಅಭಯಚಂದ್ರ, ಸುಧಾ ಪೃಥ್ವಿರಾಜ್, ಶಂಭವಕುಮಾರ್, ವಕೀಲ ಬಾಹುಬಲಿ ಪ್ರಸಾದ್ ರಂಜನ್ ಪೊವಣಿ, ರಾಜೇಶ್ವರಿ, ಸಂಶೋಧಕ ಉಮಾನಾಥ್ ಶೇಣಯ್, ಶ್ರೇಯಾಂಸ ಕುಮಾರ್, ಸಜಲ್ ಜೈನ್, ರಾಜಸ್ಥಾನ, ಮಧ್ಯಪ್ರದೇಶದ ಭಕ್ತರು, ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Post a Comment

0 Comments