ಶಿರ್ತಾಡಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ:ಶುಭಾರಂಭಗೊಂಡಿದೆ ಪ್ರಕೃತಿ ಕೋಚಿಂಗ್ ಸೆಂಟರ್

ಜಾಹೀರಾತು/Advertisment
ಜಾಹೀರಾತು/Advertisment
ಶಿರ್ತಾಡಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ:ಶುಭಾರಂಭಗೊಂಡಿದೆ ಪ್ರಕೃತಿ ಕೋಚಿಂಗ್ ಸೆಂಟರ್

ಶಾಲಾ ಶಿಕ್ಷಣಕ್ಕೆ ಪೂರಕವಾಗಿ ವಿಶೇಷ ಶಿಕ್ಷಣ ಪಡೆಯಲು ಟ್ಯೂಷನ್ ಮಾದರಿಯ ಕೋಚಿಂಗ್ ಸೆಂಟರ್ ಶಿರ್ತಾಡಿಯಲ್ಲಿ ಶುಭಾರಂಭಗೊಂಡಿದೆ. ನೆಲ್ಲಿಕಾರು ಗ್ರಾಮದ ಬೋರುಗುಡ್ಡೆಯ ಶ್ರೀಮತಿ ಕವಿತಾ ಪ್ರವೀಣ್ ರವರ ನೇತೃತ್ವದಲ್ಲಿ ಈ ತರಬೇತಿ ಸಂಸ್ಥೆ ನಡೆಯಲಿದೆ.
ಪ್ರಕೃತಿ ಕೋಚಿಂಗ್ ಸೆಂಟರ್ ಎಂಬ ಹೆಸರಿನ ಈ ಸಂಸ್ಥೆಯು ಶಿರ್ತಾಡಿಯ ಡಾ.ಆಶೀರ್ವಾದ್ ಮಾಲೀಕತ್ವದ ಪ್ರಭಾ ಎಂಕ್ಲೆವ್‌ನಲ್ಲಿ ಆರಂಭಗೊಂಡಿದ್ದು ಈಗಾಗಲೇ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ. ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಟ್ಯೂಷನ್ ಸೌಲಭ್ಯ ಒದಗಿಸಲಾಗುವುದು ಎಂದು ಶ್ರೀಮತಿ ಕವಿತಾ ಪ್ರವೀಣ್ ರವರು ತಿಳಿಸಿದರು.
ಸತ್ಯಪುರ ಶ್ರೀ ಸತ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸತ್ಯನಾರಾಯಣ ತಂತ್ರಿಗಳು ದೀಪ ಬೆಳಗಿಸುವುದರ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದ್ದು ಶಿರ್ತಾಡಿ ಚರ್ಚ್ ನ ಧರ್ಮಗುರುಗಳು, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ‌ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments