ಮೂಡುಬಿದಿರೆ ಬಿ.ಆರ್.ಪಿ ಪ್ರೌಢಶಾಲೆಯಲ್ಲಿ ಪ್ರಸಕ್ತ ವಷ೯ದ ಶಾಲಾ ಆರಂಭೋತ್ಸವ : ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಬಿ.ಆರ್.ಪಿ ಪ್ರೌಢಶಾಲೆಯಲ್ಲಿ ಪ್ರಸಕ್ತ ವಷ೯ದ ಶಾಲಾ ಆರಂಭೋತ್ಸವ : ಪುಸ್ತಕ ವಿತರಣೆ 
 ಮೂಡುಬಿದಿರೆ: ಇಲ್ಲಿನ ಬಾಬುರಾಜೇಂದ್ರ ಪ್ರೌಢಶಾಲೆಯಲ್ಲಿ ಪ್ರಸಕ್ತ ವಷ೯ದ ಶಾಲಾ ಆರಂಭೋತ್ಸವ ಹಾಗೂ ಪುಸ್ತಕ ವಿತರಣಾ ಕಾಯ೯ಕ್ರಮವು ಸೋಮವಾರ ನಡೆಯಿತು. 

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ, ವಿದ್ಯಾಥಿ೯ಗಳಿಗೆ ಪುಸ್ತಕ ವಿತರಿಸಿ ಮಾತನಾಡಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಉತ್ತಮ ಸಾಧನೆ ಮಾಡಿದರೆ ಉಜ್ವಲ ಭವಿಷ್ಯವಿದೆ. ಹೆತ್ತವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳಿಸುತ್ತಿರುವುದರಿಂದ ಶಾಲೆಗಳ ಉಳಿವಿಗೆ ಸಹಕಾರಿಯಾಗಿದೆ ಎಂದ ಅವರು ಪ್ರತಿವರ್ಷ ಶಾಲೆಯ ಅಭಿವೃದ್ಧಿಗಾಗಿ ೧ಲಕ್ಷ ರೂಪಾಯಿ ನೆರವು ನೀಡುತ್ತಿದ್ದು ಈ ಬಾರಿಯು ಈ ಮೊತ್ತವನ್ನು ನೀಡುವುದಾಗಿ ಘೋಷಿಸಿದರು.
  ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಸದಸ್ಯರಾದ ಪುಷ್ಪರಾಜ್ ಜೈನ್, ದಾಮೋದರ ಆಚಾರ್ಯ, ಪುಸ್ತಕದ ದಾನಿಗಳಾದ ಮೂಕಾಂಬಿಕ ಭಟ್, ಸುಮ ಪಾರಾಡ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಶಾಲಾ ಮುಖ್ಯ ಶಿಕ್ಷಕಿ ತೆರೆಜಾ ಕಾರ್ಡೋಜ ಸ್ವಾಗತಿಸಿದರು. ಶಿಕ್ಷಕರಾರ ಕಿರಣ್ ವಂದಿಸಿದರು. ಭರತ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments