ಮೂಡುಬಿದಿರೆ : ತಾಲೂಕಿನ ಕಲ್ಲಮುಂಡ್ಕೂರು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿ ಕೇಶವ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸುಧಾಕರ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 10 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಇಬ್ಬರು ಆಯ್ಕೆಯಾಗಿದ್ದರು.
ಬಿಜೆಪಿ ಮುಖಂಡರ ಪ್ರಕಾರ ಅಧ್ಯಕ್ಷಗಾಧಿಗೆ ವಿದ್ಯಾನಂದ ಶೆಟ್ಟಿ ಎಂಬವರು ಅಭ್ಯಥಿ೯ಯಾಗಿದ್ದರು. ಆದರೆ ಕೇಶವ ಪೂಜಾರಿ ಅವರು ಕೂಡಾ ಆಕಾಂಕ್ಷಿಯಾಗಿದ್ದು ನಾಮಪತ್ರ ಸಲ್ಲಿಸಿದ್ದರು.
ನಂತರ ನಡೆದ ಗುಪ್ತ ಮತದಾನದಲ್ಲಿ ಕೇಶವ ಪೂಜಾರಿ ಅವರಿಗೆ ಅವರು ಆಯ್ಕೆಯಾಗಿದ್ದರು. ಸುಧಾಕರ ಪೂಜಾರಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


0 Comments