ವಾಲ್ಪಾಡಿ ರಸ್ತೆ ಬದಿ ಕಸ ಸುರಿದವರಿಂದಲೇ ಕ್ಲೀನ್ ಮಾಡಿಸಿದ ಗ್ಯಾರಂಟಿ ಅಧ್ಯಕ್ಷ

ಜಾಹೀರಾತು/Advertisment
ಜಾಹೀರಾತು/Advertisment
ವಾಲ್ಪಾಡಿ ರಸ್ತೆ ಬದಿ ಕಸ ಸುರಿದವರಿಂದಲೇ ಕ್ಲೀನ್ ಮಾಡಿಸಿದ ಗ್ಯಾರಂಟಿ ಅಧ್ಯಕ್ಷ 
ಮೂಡುಬಿದಿರೆ : ಶಿರ್ತಾಡಿ ಪರಿಸರದ ಒಂದಿಬ್ಬರು ವ್ಯಕ್ತಿಗಳು ಕಸವನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಬಂದು ವಾಲ್ಪಾಡಿ ಗ್ರಾ. ಪಂ. ವ್ಯಾಪ್ತಿಯ ಕೊಯಕುಡೆ ಚಡಾವು ರಸ್ತೆ ಪಕ್ಕದಲ್ಲಿ ತಂದು ಸುರಿದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಕಸ ತಂದು ಹಾಕಿದವರಿಂದಲೇ ಕ್ಲೀನ್ ಮಾಡಿಸಿದ ಘಟನೆ ಗುರುವಾರ ನಡೆದಿದೆ. 
 ರಸ್ತೆ ಬದಿಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಈವ೯ರು ವ್ಯಕ್ತಿಗಳು ಗೋಣಿ ಚೀಲದಲ್ಲಿ ತಂದಿದ್ದ ಕಸವನ್ನು ರಸ್ತೆ ಬದಿಗೆ ಸುರಿದು ಹೋಗಿದ್ದರು. ಇದು ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು.
ಈ ವಿಚಾರ ಅರುಣ್ ಕುಮಾರ್ ಶೆಟ್ಟಿ ಅವರ ಗಮನಕ್ಕೆ ಬಂದಿದೆ.ಕೂಡಲೇ ಅವರಿಬ್ಬರನ್ನೂ ಕಂಡು ಹಿಡಿದು ಅವರಿಂದಲೇ ಹೆಕ್ಕಿಸಿಗೋಣಿ ಚೀಲಕ್ಕೆ ತುಂಬಿಸಿ ಕಳುಹಿಸಿ ಕೊಟ್ಟಿದ್ದಲ್ಲದೆ ರೂ. 1000 ದಂಡವನ್ನೂ ಹಾಕಿಸಿದ್ದಾರೆ. ಒಂದು ಸಾವಿರ ಫೈನನ್ನೂ ಹಾಕಿಸಿದ್ದಾರೆ.

ಅರುಣ್ ಕುಮಾರ್ ಶೆಟ್ಟಿ ಅವರು ನೀರು, ಚರಂಡಿ ರಿಪೇರಿ, ಗ್ಯಾರಂಟಿ ಅನುಷ್ಠಾನ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಕಸ ಹೆಕ್ಕಿಸುವ ಮೂಲಕ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ.

ಅರುಣ್ ಅವರ ಈ ಉತ್ತಮ ಕಾಯ೯ವು ಕಂಡಕಂಡಲ್ಲಿ ಕಸ ಹಾಕುವವರಿಗೆ ಒಳ್ಳೆಯ ಪಾಠವಾಗಿದೆ.

Post a Comment

0 Comments