ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಯುವಮೊರ್ಚಾ ಮುಲ್ಕಿ-ಮೂಡುಬಿದಿರೆ ಮಂಡಲದ ಮಾಸಿಕ ಸಭೆಯು ಭಾನುವಾರ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿನ ಪಕ್ಷದ ಕಛೇರಿಯಲ್ಲಿ ಯುವಮೊರ್ಚಾ ಅಧ್ಯಕ್ಷರಾದ ಕುಮಾರ್ ಪ್ರಸಾದ್ ನೇತೃತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾ ಯುವಮೊರ್ಚಾ ಅಧ್ಯಕ್ಷರಾದ ನಂದನ್ ಮಲ್ಯ,ಜಿಲ್ಲಾ ಯುವಮೊರ್ಚಾ ಉಪಾಧ್ಯಕ್ಷರು ಹಾಗೂ ಪ್ರಭಾರಿಗಳಾದ ಪ್ರಮೋದ್ ದಿಡುಪೆ, ರಿತೇಶ್ ಶೆಟ್ಟಿ ಎಕ್ಕಾರ್, ಜಿಲ್ಲಾ ಕಾರ್ಯದರ್ಶಿಗಳಾದ ನವೀನ್ ರಾಜ್ ಮೂಲ್ಕಿ,ಯುವಮೊರ್ಚಾ ಮಂಡಲ ಕಾರ್ಯದರ್ಶಿ,ಪ್ರಭಾರಿಗಳಾದ ಪ್ರೇಮರಾಜ್ ಶೆಟ್ಟಿ, ಪುರುಷೋತ್ತಮ ಶೆಟ್ಟಿಗಾರ್ ಹಾಗೂ ಯುವಮೊರ್ಚಾದ ಪದಾಧಿಕಾರಿಗಳು,ಸದಸ್ಯರು ಹಾಜರಿದ್ದರು.
ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ ಸ್ವಾಗತಿಸಿದರು
ಶಿವ ಪ್ರಸಾದ್ ಶೆಟ್ಟಿ ವಂದಿಸಿದರು.
"ನಾರಿ ಶಕ್ತಿ ವಂದನ ಅಧಿನಿಯಮ" ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಕಾಂಗ್ರೆಸ್ ವಿರೋಧಿಸಿರುವುದಕ್ಕೆ ಸಭೆಯಲ್ಲಿ ಖಂಡಿಸಲಾಯಿತು.


0 Comments