ಮೂಡುಬಿದಿರೆ ಇನ್‌ಸ್ಪೆಕ್ಟರ್ ಸಂದೇಶ್ ಕೇಸ್ : ರದ್ದುಗೊಳಿಸಲು ನಿರಾಕರಿಸಿದ ಹೈಕೋಟ್೯
ಮೂಡುಬಿದಿರೆ : ಇಲ್ಲಿನ ಇನ್ಸ್ ಪೆಕ್ಟರ್ ಸಂದೇಶ್ ಪಿ. ಜಿ. ವಿರುದ್ಧ ಅತ್ಯಾಚಾರ ಹಾಗೂ ಜೀವ ಬೆದರಿಕೆ ಆರೋಪ ಸಂಬಂಧ ಇಬ್ಬರು ಮಹಿಳಾ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿದ ಹೈಕೋರ್ಟ್, ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ, ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಆರೋಪಿಗಳಿಗೆ ಕಾಯ್ದಿರಿಸಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ಪಿ.ಜಿ.ಸಂದೇಶ್ ಹಾಗೂ ಇಬ್ಬರು ಮಹಿಳೆಯರು ಸಲ್ಲಿಸಿದ್ದ ಅಜಿ೯ ವಿಚಾರಣೆ ನಡೆಸಿದ ನ್ಯಾಯಮೂತಿ೯
ಎಂ.ನಾಗಪ್ರಸನ್ನ ಅವರ ಪೀಠವು ಅರ್ಜಿದಾರರ ವಿರುದ್ಧ ಎಫ್ ఐఆರ್ ಹಾಗೂ ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.
ಇದರಿಂದ ಅರ್ಜಿಯನ್ನು ಹಿಂಪಡೆಯುವುದಾಗಿ అಜಿ೯ದಾರರು ತಿಳಿಸಿದ ಕಾರಣ ಅಜಿ೯ ವಜಾಗೊಳಿಸಿ ಆದೇಶಿಸಿತು. ಜೊತೆಗೆ ದೋಷಾರೋಪಪಟ್ಟಿಸಲ್ಲಿಕೆಯಾದರೆ, ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅಜಿ೯ದಾರರು ಸ್ವತಂತ್ರರಿದ್ದಾರೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಂ.ಆರ್. ಬಾಲಕೃಷ್ಣ ಹಾಜರಾಗಿ, ಅರ್ಜಿದಾರರ ಮೇಲೆ ಅತ್ಯಾಚಾರ ಆರೋಪ ಮಾಡಲಾಗಿದೆ ದೂರಿನಲ್ಲಿ ಆರೋಪಿಸಿರುವ ಘಟನೆಯು 2022ರ ನವಂಬರ್ ನಿಂದ 2023 ಜೂನ್ ವರೆಗೆ ನಡೆದಿದೆ. ದೂರನ್ನು 2016ರ ಮಾರ್ಚ್ 21 ರಂದು ದಾಖಲಿಸಲಾಗಿದೆ. ಮೂರು ವರ್ಷಗಳ ಕಾಲ ವಿಳಂಬವಾಗಿ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರನ್ನು ಸಿಲುಕಿಸಲು ದೊಡ್ಡ ಪಿತೂರಿ ನಡೆಸಲಾಗಿದೆ. ಹಾಗಾಗಿ, ಎಫ್‌ಐಆರ್ ರದ್ದುಪಡಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಅದಕ್ಕೆ ನ್ಯಾಯಪೀಠ, ಪಿತೂರಿ ಅರ್ಜಿದಾರರು ಏನೂ ಮಾಡಿಲ್ಲವೇ ಎಂದು ಕೇಳಿತು ಅಜಿ೯ದಾರರ ಪರ ವಕೀಲರು, ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದಾರೆ. ದೂರುದಾರೆಯು ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ದೂರುದಾರೆ ಮಾಡಿರುವ ಆರೋಪಗಳ ಮಾದರಿಯನ್ನು ಜನ ಸಾಮಾನ್ಯರು ನಂಬುವಂತಿಲ್ಲ ఎంದರು.
ಆಗ ನ್ಯಾಯಪೀಠ, ಅದರ ಬಗ್ಗೆ ನಿಮಗೆ ಚಿಂತೆಬೇಡ. ಜನ ಸಾಮಾನ್ಯರು ನಂಬುವುದಿಲ್ಲ. ಅಸಾಮಾನ್ಯರು ನಂಬುತ್ತಾರೆ ಬಿಡಿ. ಅರ್ಜಿದಾರರ ವಿರುದ್ಧ ಪದೇ ಪದೇ ಅತ್ಯಾಚಾರ ಮಾಡಿರುವ ಆರೋಪವಿದೆ. ಇನ್ಸ್ ಪೆಕ್ಟರ್ ಸಂದೇಶ್ ಬಿಟ್ಟು ಉಳಿದ ಇಬ್ಬರು ಮಹಿಳಾ ಅಜಿ೯ದಾರರ ಮೇಲೆ ಏನು ಆರೋಪವಿದೆ ಎಂದು ಕೇಳಿತು.
ದೂರುದಾರೆಯ ಪರ ವಕೀಲರು ಮಹಿಳಾ ಆರೋಪಿಗಳು ದೂರದಾರೆಯ ಮನೆಗೆ ಬಂದು ಸಂದೇಶ್ ಅವರ ವಿರುದ್ಧ ಪ್ರಕರಣ ಮುಂದುವರೆಸಬಾರದು ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು 800 ಫೋನ್ ರೆಕಾಡಿ೯ಂಗ್ ಇವೆ ಎಂದು ತಿಳಿಸಿದರು.
ನ್ಯಾಯಪೀಠ, ಹಾಗಾದರೆ ಅರ್ಜಿದಾರರ ವಿರುದ್ಧ ತನಿಖೆ ಗೆ ತಡೆಯಾಜ್ಞೆ ನೀಡುವುದಿಲ್ಲ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಸಂದೇಶ್ ಈ ರೀತಿ ಮಾಡಬಾರದು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದರೆ, ನಂತರ ಆರೋಪ ಕೈ ಬಿಡಲು ಕೋರಿ ಸಂದೇಶ್ ಹಾಗೂ ಇತರೆ ಅರ್ಜಿದಾರರು ಹೈಕೋರ್ಟ್ ಅರ್ಜಿ ಸಲ್ಲಿಸಬಹುದು. ಆ ಅವಕಾಶವನ್ನು ಕಾಯ್ದಿರಿಸಲಾಗುವುದು ಎಂದು
ಅರ್ಜಿದಾರರ ಪರ ವಕೀಲರು, ಸಂದೇಶ್ ವಿರುದ್ಧದ ಆರೋಪಗಳಿಗೆ ಪೂರಕವಾದ ಪುರಾವೆಗಳಿಲ್ಲ ತನಿಖೆ ನಡೆಯುತ್ತಿದೆ. ಕೊನೆಪಕ್ಷ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಅದಕ್ಕೆ ನ್ಯಾಯಪೀಠ ಒಪ್ಪದಕ್ಕೆ ಅರ್ಜಿದಾರರ ಪರ ವಕೀಲರು ಅಜಿ೯ ಹಿಂಪಡೆಯುವುದಾಗಿ ತಿಳಿಸಿದರು. ಇದರಿಃದ ನ್ಯಾಯಪೀಠ ಅಜಿ೯ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿತು.
---------------------
ಪ್ರಕರಣ : ಸಂತ್ರಸ್ತೆಯಾದ ಖಾಸಗಿ ಶಾಲಾ ಮುಖ್ಯ ಶಿಕ್ಷಕಿ ನೀಡಿದ್ದ ದೂರಿನ ಮೇರೆಗೆ ಮೂಡುಬಿದಿರೆ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್ ವಿರುದ್ಧ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ ಸೇರಿದಂತೆ ಇನ್ನಿತರ ದಾಖಲಾಗಿತ್ತು, ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್, 2018 ರಿಂದ 2023ರ ವರೆಗೆ ಮನೆಗೆ ಬಂದು ಅತ್ಯಾಚಾರ ಮಾಡಿರುವುದಾಗಿ ಸ್ವತಃ ಶಿಕ್ಷಕಿ ದೂರಿನಲ್ಲಿ ಆರೋಪಿಸಿದ್ದರು.
______________



0 Comments