ಮಾರೂರು ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ : ವೈಭವದ ಹೊರೆಕಾಣಿಕೆ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment
ಮಾರೂರು ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ : ವೈಭವದ ಹೊರೆಕಾಣಿಕೆ ಮೆರವಣಿಗೆ 
 
ಮೂಡುಬಿದಿರೆ: ಸುಮಾರು ೮ ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ 29ರಿಂದ ಮೇ.೧ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದಂಗವಾಗಭಾನುವಾರ ಸ್ವರಾಜ್ಯ ಮೈದಾನದ ಪುರಾತನ ಮಾರಿಗುಡಿಯಿಂದ ಹೊಸಂಗಡಿ ದೇವಸ್ಥಾನದ ವರೆಗೆ ಭವ್ಯವಾದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು. 
 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಸ್ವರಾಜ್ಯ ಮೈದಾನದಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
 
ಚೆಂಡೆ ಬಳಗ, ವಿವಿಧ ಕಲಾ ತಂಡಗಳು ಹಾಗೂ ಭಜನಾ ತಂಡಗಳು ಮೆರವಣಿಗೆಗೆಯ ಮೂಲಕ ಸಾಗಿ ದೇವಸ್ಥಾನಲ್ಲಿ ಹೊರೆ ಕಾಣಿಕೆಯನ್ನು ಸಮಪಿ೯ಸಲಾಯಿತು. ಬ್ರಹ್ಮಕಲಶ ಜೀಣೋ೯ದ್ಧಾರ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಂಭು ಎನ್. ಶೆಟ್ಟಿ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್, ಆಡಳಿತ ಮೊಕ್ತೇಸರರು ಸಂಪತ್ ಕುಮಾರ್ ಶೆಟ್ಟಿ , ಪ್ರಧಾನ ಕಾಯ೯ದಶಿ೯ ರವಿಪ್ರಸಾದ್ ಕೆ. ಶೆಟ್ಟಿ, ಉಪಾಧ್ಯಕ್ಷರುಗಳಾದ ಶ್ರೀಪತಿ ಬಡಕೋಡಿ, ಮಿತ್ತೊಟ್ಟುಗುತ್ತು ಸುಧಾಕರ ಶೆಟ್ಟಿ, ಕಾಯ೯ದಶಿ೯ ಸುನಿಲ್ ಕುಮಾರ್ ಶೆಟ್ಟಿ ಮಾರೂರು, ಕೋಶಾಧ್ಯಕ್ಷ ಶಂಕರ ಎ. ಕೋಟ್ಯಾನ್, ಜೀಣೋ೯ದ್ಧಾರ ಸಮಿತಿಯ ಪ್ರ. ಕಾಯ೯ದಶಿ೯ ರಾಮದಾಸ ಅಸ್ರಣ್ಣ, ಸ್ವಾಗತ ಸಮಿತಿಯ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ, ಉದ್ಯಮಿ ರಾಘು ಸಿ ಪೂಜಾರಿ, ಕೋಶಾಧಿಕಾರಿ ಶಂಕರ ಎ. ಕೋಟ್ಯಾನ್, ಜತೆ ಕಾರ್ಯದರ್ಶಿ ಸುಶಾಂತ್ ಕರ್ಕೇರಾ, ಆರ್ಥಿಕ ಸಮಿತಿಯ ಅಶೋಕ್ ಬಿ, ದೇವರಾಜ್ ಸುವರ್ಣ ಪೊಸಲಾಯಿ, ಧರಣೇಂದ್ರ ಕುಮಾರ್ ರ್ಸೇರಿದಂತೆ ಸಮಿತಿ ಸದಸ್ಯರು, ಊರಿನ ಜನರು ಪಾಲ್ಗೊಂಡಿದ್ದರು.

Post a Comment

0 Comments