ಮಾಂಟ್ರಾಡಿ ಗ್ರಾಮದ ಸುನಂದಾ ಬದುಕಿಗೆ ಆಸರೆಯಾದ ಧರ್ಮಸ್ಥಳ ಯೋಜನೆ: ವಾತ್ಸಲ್ಯ ಮನೆ ಹಸ್ತಾಂತರ

ಜಾಹೀರಾತು/Advertisment
ಜಾಹೀರಾತು/Advertisment
ಮಾಂಟ್ರಾಡಿ ಗ್ರಾಮದ ಸುನಂದಾ ಬದುಕಿಗೆ ಆಸರೆಯಾದ ಧರ್ಮಸ್ಥಳ ಯೋಜನೆ: ವಾತ್ಸಲ್ಯ ಮನೆ ಹಸ್ತಾಂತರ
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕು ವತಿಯಿಂದ, ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ವಾತ್ಸಲ್ಯ ಕಾರ್ಯಕ್ರಮದಡಿ ಮಾಂಟ್ರಾಡಿ ವಲಯದ ಮಂಟ್ರಡಿ ಗ್ರಾಮದ ಸುನಂದಾ ಅವರಿಗೆ ನಿರ್ಮಿಸಿಕೊಟ್ಟ ನೂತನ ವಾತ್ಸಲ್ಯ ಮನೆಯನ್ನು ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯೋಜನೆಯ ಮೂಲಕ ಪ್ರತಿ ತಿಂಗಳು ಮಾಶಾಸನ ಪಡೆಯುತ್ತಿದ್ದ ಸುನಂದಾ ಅವರ ಪರಿಸ್ಥಿತಿಯನ್ನು ಗಮನಿಸಿ, ವಾಸಕ್ಕೆ ಯೋಗ್ಯವಾದ ಸೂರಿಲ್ಲದ ಅವರಿಗೆ ವಾತ್ಸಲ್ಯ ಯೋಜನೆಯಡಿ ಸುಂದರ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಡಿ, ರಾಜ್ಯದಲ್ಲಿ ಸುಮಾರು 20,000 ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ ಆಗುತ್ತಿದ್ದು, ಇದರೊಂದಿಗೆ ವಾತ್ಸಲ್ಯ ಕಿಟ್ ಹಾಗೂ ವಾತ್ಸಲ್ಯ ಮಿಕ್ಸ್ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸುನಂದಾ ಕುಟುಂಬದವರು ಈ ಮನೆಯಲ್ಲಿ ಉತ್ತಮವಾಗಿ ಬಾಳಿ ಬದುಕಲಿ ಎಂದು ಹಾರೈಸಿದರು.

ನೆಲ್ಲಿಕಾರು ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಭಾಗವಹಿಸಿ, ವಾಸಕ್ಕೆ ಮನೆ ಇಲ್ಲದ ಬಡ ಕುಟುಂಬಕ್ಕೆ ಆಸರೆ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದರು. ಅತಿಥಿಯಾಗಿ ಆಗಮಿಸಿದ್ದ ತಾಲೂಕು ಜನಜಾಗೃತಿ ಸದಸ್ಯ ಮಹಾವೀರ ಹೆಗ್ಡೆ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಜಯಂತ್ ಹೆಗ್ಡೆ, ಶಶಿಧರ್, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ವಲಯದ ಅಧ್ಯಕ್ಷ ಕಿರಣ್, ಮಂಟ್ರಡಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವಿಠ್ಠಲ್ ಆಚಾರ್ಯ, ವಿಮಾ ಸಮನ್ವಯಾಧಿಕಾರಿ ಹೇಮಲತಾ ಹೆಗ್ಡೆ, ವಲಯದ ಮೇಲ್ವಿಚಾರಕಿ ಪುಷ್ಪ, ಸೇವಾಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಬಿ ಧನಂಜಯ್ ಸ್ವಾಗತಿಸಿದರು. ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು.

Post a Comment

0 Comments