ಮೂಡುಬಿದಿರೆ : ಶ್ರೀ ಕ್ಷೇತ್ರ ಸತ್ಯಸಾರಮಾನಿ ಕಾನದ -ಕಟದ ದೈವಸ್ಥಾನ ಗಾಳಿಗುಡ್ಡೆ ಶಿರ್ತಾಡಿ ಕರುಂಗೋಲು ಕುಣಿತದ ಆಚರಣೆ ನಡೆಯಿತು.
ತುಳುನಾಡ ಜಾನಪದ ಪ್ರಕಾರಗಳಲ್ಲಿ ಕರುoಗೊಲು ಕುಣಿತಕ್ಕೆ ವಿಶೇಷ ಸ್ಥಾನಮಾನವಿದೆ. ಈ ಕುಣಿತವನ್ನು ಸುಗ್ಗಿ ಹುಣ್ಣಿಮೆಯ ಮೊದಲಿನ
ಮೂರು ನಾಲ್ಕು ದಿನ ಅಂದರೆ ಪೂವೆ(ಹುಣ್ಣಿಮೆಯ ಹಿಂದಿನ ದಿನಗಳು )ಯಿಂದ ಪ್ರಾರಂಭಿಸಿ ಮೂರು ನಾಲ್ಕು ದಿನಗಳ ಕುಣಿತದ ನಂತರ ಒಂದು ದಿನದ " ರಾಶಿ ಪರ್ವ " ಸೇವೆಯು ನಡೆಯುತ್ತದೆ.
ಇದರ ಮೂಲ ಆಶಯ ತುಳುನಾಡಿನ ಕಾರಣಿಕ ದೈವಗಳಾದ ಅವಳಿ ವೀರರು "ಕಾನದ - ಕಟದರು" ತುಳುನಾಡಿಗೆ ಅತಿಕಾರೆ ಭತ್ತದ ಬೀಜವನ್ನು ಘಟ್ಟದಿಂದ ತಂದು ಸಾಗುವಳಿ ಮಾಡಿದ ಕಥೆಯ ಸಾರಾಂಶವೇ ಕರುಂಗೋಲು ಕುಣಿತ.
ಇದರ ಪಾಡ್ದನದ ಒಂದು ತುಣುಕು
ಪೊಲಿಯೇ ಪೊಲಿಯೆರೆ ಪೊ ಪೂವೆ ಪೋಂಡು ಉಲ್ಲಾಯ ||2||
ಕೋಡಂದೆರೆ ಪುಣ್ಣಮೆ ಇನಿಯೋಡ ಉಲ್ಲಾಯ.
ಮಾಯಿದ ಪುಣ್ಣಮೆ ಮಾ ಯೋಡೇ ಪೋತುಂಡೇ.
ಸುಗ್ಗಿದ ಪುಣ್ಣಮೆ ಓಡಾದೇರೆ ಉಲ್ಲಾಯ.
ಕರುoಗೊಲು ಕನತುನು ಏರಂದು ಕೇoಡರ.
ಕರುಂಗೋಲು ಕನತುನ ಕಾನದ -ಕಟದೇರೆ.
ಶ್ರೀ ದೈವಸ್ಥಾನದ ಗೌರವ ಧ್ಯಕ್ಷರಾದ ಗೋಪಾಲ ಶಿರ್ತಾಡಿ, ಅಧ್ಯಕ್ಷರಾದ ರಮಾನಂದ ದಡ್ಡಲ್ಪಲ್ಕೆ,ಗುರಿಕಾರರಾದ ಸಂಜೀವ ಶಿರ್ತಾಡಿ, ಅರ್ಚಕರಾದ ಕರಿಯ ಹಾಗೂ ದೈವಸ್ಥಾನದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಕಾಯ೯ಕ್ರಮದಲ್ಲಿ ರಾಕೇಶ್ ನಾರಾವಿ, ಸುದೀಪ್ ಶಿರ್ತಾಡಿ, ಸಂದೀಪ್ ಶಿರ್ತಾಡಿ, ಜಯ ಜೋಗೊಟ್ಟು ಮತ್ತಿತರರು ಸಹಕರಿಸಿದರು.


0 Comments