ಸುಮಾರು ನಾಲ್ಕು ವರ್ಷಗಳ ಹಿಂದೆ ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಮುಖಂಡರಾದ ಪ್ರವೀಣ್ ನೆಟ್ಟಾರುರವರನ್ನು ಅವರ ಚಿಕನ್ ಸೆಂಟರ್ ಬಳಿ ದುಷ್ಕರ್ಮಿಗಳು ತಲವಾರನಿಂದ ಕೊಚ್ಚಿ ಕೊಲೆ ಮಾಡಿದ್ದರು. ಮೂಲಭೂತವಾದಿಗಳಿಂದ ಸಾವಿಗೀಡಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾಜಿ ಸಂಸದರು ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ರವರು ಮನೆ ನಿರ್ಮಿಸಿ ಕೊಟ್ಟಿದ್ದರು. ಸುಮಾರು 60 ಲಕ್ಷ ರೂಪಾಯಿ ಮೊತ್ತದ ಸುಸಜ್ಜಿತವಾದ ಪ್ರವೀಣ್ ನೆಟ್ಟಾರು ಕನಸಿನ ಮನೆಯನ್ನು ಅವರ ಕುಟುಂಬಕ್ಕೆ ಸ್ವಂತ ಖರ್ಚಿನಿಂದ ನಿರ್ಮಿಸಿಕೊಟ್ಟಿದ್ದರು.
ಇಂದು ಮನೆಯ ಗ್ರಹಪ್ರವೇಶದ ಮೂರನೇ ವರ್ಷಾಚರಣೆ. ಈ ಹಿನ್ನೆಲೆಯಲ್ಲಿ ದಿ.ಪ್ರವೀಣ್ ನೆಟ್ಟಾರ್ ಅವರ ಪತ್ನಿ ಶ್ರೀಮತಿ ನೂತನ ಪ್ರವೀಣ್ ರವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಳಿನ್ ಕುಮಾರ್ ಕಟೀಲ್ ರವರ ಸಹಕಾರವನ್ನು ಸ್ಮರಿಸಿಕೊಂಡಿದ್ದಾರೆ. ಗೃಹಪ್ರವೇಶದ ಸಂದರ್ಭದ ಫೋಟೋವನ್ನು ಹಾಕಿ "ಕಾರ್ಯಕರ್ತನ ಕನಸನ್ನು ತನ್ನ ಕರ್ತವ್ಯ ಎಂದು ಸಾಕಾರಗೊಳಿಸಿದವರು ಮಾಜಿ ಸಂಸದರು ಹಾಗೂ ಭಾಜಪಾ ದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀಯುತ ನಳಿನ್ ಕುಮಾರ್ ಕಟೀಲುರವರಿಗೆ ಧನ್ಯವಾದಗಳು" ಎಂದು ಪೋಸ್ಟ್ ಮಾಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ರವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮೂಲಕ ಪ್ರವೀಣ್ ನೆಟ್ಟಾರ್ ಪತ್ನಿ ನೂತನ್ ಪ್ರವೀಣ್ ರವರಿಗೆ ಸರ್ಕಾರಿ ಉದ್ಯೋಗವನ್ನೂ ನೀಡಿದ್ದರು.


0 Comments