ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾಗಿ ಶರತ್ ಶೆಟ್ಟಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾಗಿ ಶರತ್ ಶೆಟ್ಟಿ
ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ವಕೀಲರ ಸಂಘ (ರಿ.) ಇದರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಶರತ್ ಶೆಟ್ಟಿ ಡಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಜರಗಿದ ನೂತನ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಕೆ. ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಉಳಿದಂತೆ ಮರ್ವಿನ್ ಜಾನ್ಸನ್ ಲೋಬೋ ( ಜತೆ ಕಾರ್ಯದರ್ಶಿ) , ಶ್ರೀಮತಿ ಶುಭ ಸಹನ ( ಕೋಶಾಧಿಕಾರಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ದೀಕ್ಷಾ, ಕು. ರೂಪಾ , ಶ್ರೀಮತಿ ಸಂಜನಾ ಎಚ್. ಆಯ್ಕೆಯಾಗಿದ್ಧಾರೆ. ಎಲ್ಲ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಹಿರಿಯ ನ್ಯಾಯವಾದಿ ಎಂ. ಸುಬ್ರಹ್ಮಣ್ಯ ತಂತ್ರಿ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು.

Post a Comment

0 Comments

Advertisement