ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಮೂಡುಬಿದ್ರೆಯ ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿಗೆ ಶೇಕಡಾ 97.60 ಫಲಿತಾಂಶ ಲಭಿಸಿರುತ್ತದೆ.
ಪರೀಕ್ಷೆಗೆ ಹಾಜರಾದ ಒಟ್ಟು 167 ವಿದ್ಯಾರ್ಥಿಗಳ ಪೈಕಿ 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 96ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಒಬ್ಬವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪೂರ್ಣಿಮಾ(97.50 %), ಸಮೀಕ್ಷಾ ಎಸ್. (94.83%), ಐಶ್ವರ್ಯ (92.5%), ವಿಜ್ಞಾನ ವಿಭಾಗದಲ್ಲಿ ಕುಸುಮಾ ಡಿ.ಟಿ. ಮತ್ತು ನಿಧಿ ಬೆಡೇಕರ್(97.33 %), ವಿಶಾಲ್ ಬಿ. (96.83%) ಪ್ರವೀಣ್ ಪ್ರಕಾಶ್ (96.16%) ಮತ್ತು ಕಲಾ ವಿಭಾಗದಲ್ಲಿ ಗೀತಾ(90%) ಪರಮೇಶ್ವರಿ ಎಂ.ಎ.(86.54%), ಕೌಶಿಕ್ ಎನ್.ಕೆ. (85%) ಅಂಕಗಳನ್ನು ಪಡೆದಿರುತ್ತಾರೆ ಎಂದು ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಲೆಫ಼್ಟಿನೆಂಟ್ ವಿಜಯಲಕ್ಷ್ಮಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



0 Comments