ಇಫ್ತಾರ್ ಸೌಹಾರ್ದತೆ, ಮಾನವೀಯತೆಯ ವೇದಿಕೆ : ಆಳ್ವಾಸ್‌ನ ಇಫ್ತಾರ್ ಕೂಟದಲ್ಲಿ ಅನೀಸ್ ಕೌಸರ್

ಜಾಹೀರಾತು/Advertisment
ಜಾಹೀರಾತು/Advertisment
ಇಫ್ತಾರ್ ಸೌಹಾರ್ದತೆ, ಮಾನವೀಯತೆಯ ವೇದಿಕೆ : ಆಳ್ವಾಸ್‌ನ ಇಫ್ತಾರ್ ಕೂಟದಲ್ಲಿ ಅನೀಸ್ ಕೌಸರ್
ಮೂಡುಬಿದಿರೆ: ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಇಫ್ತಾರ್‌ನಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಇವು ವಿಭಿನ್ನ ಧರ್ಮಗಳ ನಡುವೆ ಪರಸ್ಪರ ಗೌರವ ಹಾಗೂ ಸಾಮರಸ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರ್ ಅಭಿಪ್ರಾಯಪಟ್ಟರು. 
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಕೃಷಿ ಸಿರಿ ಆವರಣದಲ್ಲಿ ಆಯೋಜಿಸಿದ 23ನೇ ವರ್ಷದ ಇಫ್ತಾರ್ ಕೂಟದಲ್ಲಿ ರಂಝಾನ್ ಸಂದೇಶ ನೀಡಿದರು. 

ಪವಿತ್ರ ರಮಝಾನ್ ತಿಂಗಳಲ್ಲಿ ಆಚರಿಸಲಾಗುವ ಉಪವಾಸವು ದೇಹವನ್ನು ಮಾತ್ರವಲ್ಲದೆ ಹೃದಯವನ್ನೂ ಶುದ್ಧಗೊಳಿಸಿ ಮಾನವೀಯತೆ, ಕರುಣೆ ಮತ್ತು ದಯೆಯ ಗುಣಗಳನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು. 

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎ. ಗಫೂರ್, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ ಆಳ್ವ, ಬಿಲ್ಡರ್ ಮುಸ್ತಫಾ, ಎನ್.ಎಸ್. ಸೈಫುದ್ದೀನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಸೇರಿ ಸುಮಾರು 6,000ಕ್ಕೂ ಅಧಿಕ ಮಂದಿ ಭಾಗವಹಿಸಿದರು.

Post a Comment

0 Comments