ಮೂಡುಬಿದಿರೆ : ಎಪ್ರಿಲ್ 9 ರಿಂದ 12 ರವರೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ “ಬೆದ್ರ ಉತ್ಸವ”ದ ಆಮಂತ್ರಣ ಪತ್ರಿಕೆಯನ್ನು ಶಾಸಕ ಉಮಾನಾಥ್ ಎ.ಕೋಟ್ಯಾನ್ ಅವರು ಶನಿವಾರ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ, ಗೌರವ ಸಲಹೆಗಾರ ರಂಜಿತ್ ಪೂಜಾರಿ, ಸದಸ್ಯರಾದ ಗಣೇಶ್ ಬಿ.ಅಳಿಯೂರು, ಸಂತೋಷ್ ಕುಮಾರ್, ಜಿಲ್ಲಾ ಕಂಬಳ ಸಮಿತಿಯ ಲೊಕೇಶ್ ಶೆಟ್ಟಿ ಮುಚ್ಚೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


0 Comments