ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ 
ಹುಟ್ಟೂರ ಸನ್ಮಾನ 
 

ಮೂಡುಬಿದಿರೆ: ಸಾಹಿತ್ಯ ಮತ್ತು ಕವನಗಳು ಮಾನವನ ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನಶೀಲ ಪ್ರಕ್ರಿಯೆಗಳಾಗಿವೆ. ಆದ್ದರಿಂದ ಸಾಹಿತ್ಯ ಕೃಷಿ ಮಾಡಿದವರಿಗೆ ಮಾತ್ರ ನಿಜವಾದ ಅರ್ಥದಲ್ಲಿ ಸಾಹಿತಿ ಹಾಗೂ ಕವಿಗಳಾಗಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. 
ಅವರು ಹಿರಿಯ ಪತ್ರಕರ್ತ, ಸಾಹಿತಿ ರೇಮಂಡ್ ತಾಕೋಡೆ ಅವರ 22ನೇ ಕೃತಿ ‘ಬೊಳ್ಳಿಲು’ನ್ನು ಭಾನುವಾರ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
 
ಸದಾನಂದ ನಾರಾವಿ ಅಧ್ಯಕ್ಷತೆ ವಹಿಸಿದರು. 

ಈ ಸಂದರ್ಭದಲ್ಲಿ ಈಗಾಗಲೇ 22 ಕೃತಿಗಳನ್ನು ಪ್ರಕಟಿಸಿರುವ ರೇಮಂಡ್ ಡಿಕುನಾ ಅವರ ‘ಪಿಂಗಾರ’ ಪತ್ರಿಕೆಗೆ 22 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹುಟ್ಟೂರ ಸನ್ಮಾನದೊಂದಿಗೆ ಗೌರವಿಸಲಾಯಿತು. ಸಂಗೀತಾ ಪ್ರಭು ಸನ್ಮಾನ ಪತ್ರ ವಾಚಿಸಿದರು.
ರೇಮಂಡ್ ಡಿಕುನಾ ಮಾತನಾಡಿ, ಮೂಡುಬಿದಿರೆಯಲ್ಲಿ ಗಣ್ಯರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದರು. 
ಕೃತಿಯನ್ನು ಗೀತಾ ಲಕ್ಷ್ಮೀಶ ಶೆಟ್ಟಿ ಪರಿಚಯಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ , ತುಳು ಕೂಟ ಬೆದ್ರ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಧನಕೀರ್ತಿ ಬಲಿಪ, ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ರಿಕ್ಷಾ ಚಾಲಕರ-ಮಾಲಕರ ಸಂಘದ ಪ್ರತಿನಿಧಿ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಸದಾನಂದ ನಾರಾವಿ ನಡೆಸಿಕೊಟ್ಟರು. ಡಾ. ಸುರೇಶ್ ಕುಮಾರ ನೆಗಿನಗುಳಿ, ಧನಂಜಯ ಮೂಡುಬಿದಿರೆ, ಗೀತಾ ಲಕ್ಷ್ಮೀಶ ಶೆಟ್ಟಿ, ಪದ್ಮನಾಭ ಮಿಜಾರು, ಅನಿತಾ ಶೆಟ್ಟಿ, ಎಂ. ರಾಘವೇಂದ್ರ ಭಂಡಾರ್ಕರ್, ರಾಮಕೃಷ್ಣ ಶಿರೂರು, ಸೌಮ್ಯ ಕುಗ್ವೆ, ಮಾನಸ ಪ್ರವೀಣ್ ಭಟ್ ಮಾಂಟ್ರಾಡಿ, ಶರಣ್ಯ ಬೆಳುವಾಯಿ, ಪೂರ್ಣಿಮಾ ಕೋಟ್ಯಾನ್, ಪ್ರಶಾಂತ್ ಆಚಾರ್ಯ ಎಡಪದವು, ಸವಿತಾ ಕರ್ಕೇರಾ ತಮ್ಮ ಕವನಗಳನ್ನು ವಾಚಿಸಿದರು. 
ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು. 
ತುಳು ಕೂಟ ಮೂಡುಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ, ಜೇಸಿಐ ಮೂಡುಬಿದಿರೆ ತ್ರಿಭುವನ್, ತಾಕೋಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕರ-ಮಾಲಕರ ಸಂಘ ಹಾಗೂ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.