ಹಂಡೇಲು ಬಲಿಪರ ಮನೆಯಂಗಳದಲ್ಲಿ 'ದುಂಡು ಮೇಜಿನ ಕೃಷಿ ವಿಚಾರ ವಿನಿಮಯ'

ಜಾಹೀರಾತು/Advertisment
ಜಾಹೀರಾತು/Advertisment
ಹಂಡೇಲು ಬಲಿಪರ ಮನೆಯಂಗಳದಲ್ಲಿ 'ದುಂಡು ಮೇಜಿನ ಕೃಷಿ ವಿಚಾರ ವಿನಿಮಯ'
ಮೂಡುಬಿದಿರೆ : ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಹಿರಿಯ ಕೃಷಿಕ ಹಂಡೇಲುಗುತ್ತು ಧನಕೀರ್ತಿ ಬಲಿಪ ಅವರ ಮನೆಯ ಅಂಗಳದಲ್ಲಿ 'ದುಂಡು ಮೇಜಿನ ಕೃಷಿ ವಿಚಾರ ವಿನಿಮಯ' ಕಾಯ೯ಕ್ರಮ ನಡೆಯಿತು.

 ಶಿರ್ತಾಡಿಯ ಎಸ್.ಡಿ. ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಸಂದಭ೯ದಲ್ಲಿಯೂ ನಾವು ಭತ್ತದ ಕೃಷಿಯನ್ನು ಬಿಡಬಾರದು. ಸ್ವಂತ ವಿನಿಯೋಗಕ್ಕಾಗಿಯಾದರೂ ಭತ್ತ ಬೆಳೆಯಬೇಕು. ನಮ್ಮ ಊಟಕ್ಕಾಗಿ ನಾವೇ ಅಕ್ಕಿಯನ್ನು ಬೆಳೆಯೋಣ, ಆರೋಗ್ಯಕ್ಕೂ ಇದು ಉತ್ತಮ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಅವರು ಕಾಂಪೋಸ್ಟ್ ಗೊಬ್ಬರ ತಯಾರಿ, ಬಳಕೆ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯಕುಮಾ‌ರ್ ಅವರು ಸುಡುಮಣ್ಣು ಬಗ್ಗೆ ಮಾತನಾಡಿದರು.

ತೋಟಗಾರಿಕೆ ಹಿರಿಯ ಅಧಿಕಾರಿ ಪ್ರವೀಣ ಕೆ. ಅವರು ಹನಿ ನೀರಾವರಿಯ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಧನಕೀರ್ತಿ ಬಲಿಪ ಅವರು ಭತ್ತದ ಬೇಸಾಯ, ಕೃಷಿಯ ಲಾಭ, ನಷ್ಟುಗಳ ಕುರಿತು ವಿಚಾರ ಮಂಡಿಸಿದರು.

ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ಬಗ್ಗೆ ಬಹುವಿಧ ಕೃಷಿಕ ಅಂಬೂರಿ ನಾಗರಾಜ ಶೆಟ್ಟಿ ಜೇನು ವ್ಯವಸಾಯದ ಬಗ್ಗೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮಾತನಾಡಿದರು.

ತಾಕೊಡೆಯ ಎಡ್ವರ್ಡ್ ರೆಬೆಲ್ಲೋ ಅವರು ಕಸಿ ಕಟ್ಟುವ ವಿಧಾನ, ಪ್ರಯೋಜನಗಳ ಬಗ್ಗೆ, ಹಣ್ಣಿನ ಗಿಡಗಳ ವಿಚಾರವಾಗಿ ಪಾಸ್ಕಲ್ ಪಿಂಟೋ, ಸಾವಯವ ಕೃಷಿ ಬಗ್ಗೆ ಮಾಜಿ ಅಧ್ಯಕ್ಷ ಜಿನೇಂದ್ರ ಹೆಗ್ಡೆ ಕಾಳುಮೆಣಸು ಕೃಷಿ ಬಗ್ಗೆ ಗುಣಪಾಲ ಮುದ್ದ ಇವರು ವಿಷಯ ಮಂಡಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಧನಕೀರ್ತಿ ಬಲಿಪ ಅವರನ್ನು ಸಮ್ಮಾನಿಸಲಾಯಿತು. ತೋಟಗಾರಿಕೆ ಅಧಿಕಾರಿ ಪ್ರವೀಣ ಕೆ. ಅವರನ್ನು ಗೌರವಿಸಲಾಯಿತು.

ಕುಪ್ಪೆಪದವು ಮನೋಹರ ಶೆಟ್ಟಿ ಯಶೋದಾ ಪ್ರಭಾಕರ, ಚಂದ್ರಿಕಾ ಸುಕುಮಾರ್, ಸೆಲ್ವಿನಾ, ಸಾಯಿ ಪ್ರಕಾಶ್ ಪರಿಂಜೆ ಚರ್ಚೆಗಳಲ್ಲಿ ಪಾಲ್ಗೊಂಡರು. ಜಿನೇಂದ್ರ ಹೆಗ್ಡೆ ನಿರೂಪಿಸಿ, ಕೋಶಾಧಿಕಾರಿ ಲಿಗ್ವಿನ್ ಡಿಕೋಸ್ತಾ ಮದಿಸಿದರು.

Post a Comment

0 Comments