ಉಡುಪಿಯಲ್ಲಿ ದಾಖಲೆಯ ಬೃಹತ್ ಉದ್ಯೋಗ ಮೇಳ:ಸಾವಿರಾರು ಆಕಾಂಕ್ಷೆಗಳಿಂದ ಸಂದರ್ಶನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಉಡುಪಿಯಲ್ಲಿ ದಾಖಲೆಯ ಬೃಹತ್ ಉದ್ಯೋಗ ಮೇಳ:ಸಾವಿರಾರು ಆಕಾಂಕ್ಷೆಗಳಿಂದ ಸಂದರ್ಶನ
ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ‌ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಪಾದರ ಆತ್ಮಾನಂದ ಸರಸ್ವತಿ ಐಟಿಐ ಮಾನ್ಯ ಬಿಲ್ಲಾಡಿ ಇದರ ನೇತೃತ್ವದಲ್ಲಿ ನಡೆದ ಮೂರನೇ ವರ್ಷದ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಐತಿಹಾಸಿಕ ಬೃಹತ್ ಉದ್ಯೋಗ ಮೇಳದ ಉದ್ಘಾಟನೆಯನ್ನು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಯತಿವರ್ಯರ ಉಪಸ್ಥಿತಿಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವರವರು ಉದ್ಘಾಟಿಸಿದರು.
 ಮಾಜಿ ಶಾಸಕರು ಹಾಗೂ ಅಪ್ರೆಂಟಿಶಿಪ್ ಮೇಳ ಮತ್ತು ಉದ್ಯೋಗ ಮೇಳದ ಅಧ್ಯಕ್ಷರಾದ ಕೆ ರಘುಪತಿ ಭಟ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ, ಬಿಲ್ಲವ ಮಹಾಮಂಡಲ ಇದರ ಅಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜೆ. ಸುವರ್ಣ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಶ್ರೀ ಪದ್ಮರಾಜ್ ರಾಮಯ್ಯ, ಉದ್ಯೋಗ ಮೇಳ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಶ್ರೀ ಮಹೇಶ್ ಠಾಕೂರ್, ಕಾರ್ಯಾಧ್ಯಕ್ಷರಾದ ಶ್ರೀ ಓಬು ಪೂಜಾರಿ ಸೇರಿದಂತೆ ಇತರೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
 ಸುಮಾರು ನೂರು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು 5000ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಂಕ್ಷಿಗಳು ಸೇರಿದ್ದರು.

Post a Comment

0 Comments

Advertisement