ಮೂಡುಬಿದಿರೆ : ಇಲ್ಲಿನ ಬಾಬು ರಾಜೇಂದ್ರ ಪ್ರೌಢಶಾಲೆಗೆ ಬೆಂಗಳೂರಿನ ಟೆಕ್ನೋಯಲಜಿ ಇಂಡಿಯಾ ಆಯಿಲ್ಸ್ ಆಂಡ್ ಫ್ಯಾಟ್ಸ್ ಪ್ರೈವೇಟ್ ಲಿಮಿಟೆಡ್ ಇದರ 2025-26ರ ಸಿಎಸ್ ಆರ್ ನಿಧಿ ರೂ. 5 ಲಕ್ಷ ವೆಚ್ಚದಲ್ಲಿ ಕೊಡಮಾಡಿರುವ ಕೊಡುಗೆಗಳ ಹಸ್ತಾಂತರ ಕಾಯ೯ಕ್ರಮವು ಶುಕ್ರವಾರ ನಡೆಯಿತು.
ಟೆಕ್ನೋಯಲಜಿ ಇಂಡಿಯಾ ಆಯಿಲ್ಸ್ ಮತ್ತು ಪ್ಯಾಟ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ರಘುರಾಮ್ ಮುಳಿಯ ಅವರು 2- ಸ್ಮಾರ್ಟ್ ಟಿವಿ, 3-ಲ್ಯಾಪ್ ಟಾಪ್, 1-ಪ್ರಾಜೆಕಟರ್, ಜನರೇಟರ್ ಹಾಗೂ ಜೆರಾಕ್ಸ್ ಮೆಷಿನ್ ನನ್ನು ಹಸ್ತಾಂತರಿಸಿ ಮಾತನಾಡಿ ವಿದ್ಯಾಥಿ೯ಗಳಲ್ಲಿ ಪ್ರತಿಯೊಬ್ಬರಲ್ಲಿಯೂ ವಿವಿಧ ರೀತಿಯ ಪ್ರತಿಭೆಗಳಿವೆ. ಕೇವಲ ಪಠ್ಯ ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ ಇತರ ಕೌಶಲವನ್ನು ವೃದ್ಧಿಸಿಕೊಂಡು ಬೆಳೆಯುವ ಮೂಲಕ ಮುಂದಿನ ದಿನಗಳಲ್ಲಿ ತಮ್ಮಿಂದ ಸಹಕಾರ ದೊರೆಯುವಂತಾಗಬೇಕು.
ಹೆತ್ತವರು ನಿಮ್ಮ ಮೇಲೆ ಯಾವುದಾದರೊಂದು ಕನಸು ಕಂಡು ನಿಮ್ಮನ್ನು ಈ ಸಂಸ್ಥೆಗೆ ಸೇರಿಸಿರುತ್ತಾರೆ ಅವರ ಕನಸನ್ನು ನನಸಾಗಿಸಲು ಶಿಕ್ಷಕರು ಶ್ರಮ ವಹಿಸಿರುತ್ತಾರೆ. ಅವರ ಶ್ರಮ ಮತ್ತು ನಮ್ಮ ಯೋಗದಿಂದಾಗಿ ಈ ಸಂಸ್ಥೆಗೆ ಸಹಕಾರ ನೀಡುತ್ತಿದ್ದೇವೆ ಎಂದರು.
ಮಾಜಿ ಸಚಿವ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರವ : ಶಾಲೆಗೆ ಕೊಡುಗೆಗಳನ್ನು ನೀಡಿರುವ ರಘುರಾಮ ಮುಳಿಯ ಹಾಗೂ ಅವರಿಂದ ಸಹಕಾರ ಪಡೆಯಲು ಕಾರಣೀಕತ೯ರಾಗಿರುವ ಶಿಕ್ಷಕ ಗೋವಧ೯ನ್ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷರುಗಳಾದ ಸಂಪತ್ ಸಾಮ್ರಾಜ್ಯ, ಪುಷ್ಪರಾಜ್ ಜೈನ್, ಸದಸ್ಯರಾದ ರಾಮ್ ಪ್ರಸಾದ್ ಭಟ್, ನಿವೃತ್ತ ಮುಖ್ಯ ಶಿಕ್ಷಕ ಬಾಹುಬಲಿ, ಕಂಪನಿಯ ಟೆಕ್ನಿಕಲ್ ಮೆನೇಜರ್ ಯೊಗೀಶ್ ನಾಯಕ್, ಶಾಲಾ ಹಳೆ ವಿದ್ಯಾಥಿ೯ ನಾಗರಾಜ್ ಉಪಸ್ಥಿತರಿದ್ದರು.
ಸಂಚಾಲಕ ರಾಮ್ ನಾಥ್ ಭಟ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ತೆರೆಜಾ ಖಡೋ೯ಜಾ ಪ್ರಾಸ್ತಾವಿಕವಾಗಿ ಮಾತನಾಡಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ಕಾಯ೯ಕ್ರಮ ನಿರೂಪಿಸಿದರು. ಶಿಕ್ಷಕ ಕಿರಣ್ ವಂದಿಸಿದರು.


0 Comments