ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯವು 2025ನೇ ಸಾಲಿನಲ್ಲಿ ನಡೆಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳು ಒಟ್ಟು 15 ರ‍್ಯಾಂಕ್‌ಗಳಿಸಿ ಗಮನಾಹ೯ ಸಾಧನೆ ಮಾಡಿದ್ದಾರೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ನಾತಕೋತ್ತರ ರ‍್ಯಾಂಕ್ :
ಎಂಎ ಇಂಗ್ಲೀಷ್ ವಿಭಾಗದ ಪವಿತ್ರ ತೇಜ್, ಎಂಕಾಂ ಎಚ್‌ಆರ್‌ಡಿ ವಿಭಾಗದ ಹರ್ಷಿತಾ, ಆಹಾರ ವಿಜ್ಞಾನ ಹಾಗೂ ಪೋಷಣೆ ವಿಭಾಗದ ವಿಭಾಶ್ರೀ ಜಿಆರ್, ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರತೀಕ್ಷಾ, ರಸಾಯನಶಾಸ್ತ್ರ ವಿಭಾಗದ ಮೆಲಿಸಾ ವಿಡಿ, ಹಾಗೂ ಮನಶಾಸ್ತ್ರ ವಿಭಾಗದ ಸಾಮ್ನ ಜಾರ್ಜ ಪ್ರಥಮ ರ‍್ಯಾಂಕ್‌ನೊಂದಿಗೆ ಆರು ಪ್ರಥಮ ರ‍್ಯಾಂಕ್‌ಗಳು ಆಳ್ವಾಸ್ ಸ್ನಾತಕೋತ್ತರ ವಿದ್ಯಾರ್ಥಿಗಳು ಗಳಿಸಿದ್ದಾರೆ.
ಪದವಿ ರ‍್ಯಾಂಕ್‌ಗಳು:
ಬಿಎ ವಿಭಾಗದ ನಂದಿನಿ ಶೆಣೈ ನಾಲ್ಕನೇ ರ‍್ಯಾಂಕ್ ಗಳಿಸಿದರೆ, ಬಿಕಾಂ ವಿಭಾಗದಲ್ಲಿ ಪ್ರಜ್ಞಾ ನಾಲ್ಕನೇ ರ‍್ಯಾಂಕ್ ಹಾಗೂ ಸುರಕ್ಷಾ ಜೈನ್ ಆರನೇ ರ‍್ಯಾಂಕ್ ಹಾಗೂ ಶ್ರದ್ಧಾ ಮೀರಾ 8ನೇ ರ‍್ಯಾಂಕ್ ಗಳಿಸಿದ್ದಾರೆ.
ಬಿಬಿಎ ವಿಭಾಗದಲ್ಲಿ ರಿತುನಂದ ಆರ್ ಏಳನೇ ರ‍್ಯಾಂಕ್ ಪಡೆದು ಒಟ್ಟು ಪದವಿ ವಿಭಾಗದಲ್ಲಿ ಒಟ್ಟು 5 ರ‍್ಯಾಂಕ್‌ಗಳು ಆಳ್ವಾಸ್ ಕಾಲೇಜಿಗೆ ಲಭಿಸಿದೆ.
ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್) ಮಾನಸ ಪ್ರಥಮ ರ‍್ಯಾಂಕ್ ಗಳಿಸಿದರೆ, ಕೆ ಶಿವಾನಿ ದ್ವಿತೀಯ ಹಾಗೂ ಪ್ರಧ್ವಿ ನಾಯಕ್ ಎಂಟನೇ ರ‍್ಯಾಂಕ್ ಗಳಿಸಿದ್ದಾರೆ. ಈ ವಿಭಾಗದಲ್ಲಿ ಒಟ್ಟು ಹತ್ತರ ಒಳಗೆ ಮೂರು ರ‍್ಯಾಂಕ್‌ಗಳು ಆಳ್ವಾಸ್‌ಗೆ ಲಭಿಸಿದೆ.
ದೈಹಿಕ ಶಿಕ್ಷಣ ಕಾಲೇಜಿನ ಕಾಲೇಜಿನ ಚೈತ್ರಾ ಪಿ ಪ್ರಥಮ ರ‍್ಯಾಂಕ್‌ಗಳಿಸಿದ್ದಾರೆ.
ಈ ಮೂಲಕ ಆಳ್ವಾಸ್ ವಿದ್ಯಾರ್ಥಿಗಳು ಒಟ್ಟು 8 ಪ್ರಥಮ ರ‍್ಯಾಂಕ್, 1 ದ್ವಿತೀಯ, 2 ಚತುರ್ಥ, 1 ಆರನೇ ರ‍್ಯಾಂಕ್, 1 ಏಳನೇ ರ‍್ಯಾಂಕ್, 2 ಎಂಟನೇ ರ‍್ಯಾಂಕ್ ಗಳಿಸಿ ಒಟ್ಟು 15 ರ‍್ಯಾಂಕ್‌ಗಳೊಂದಿಗೆ ಮಂಗಳೂರು ವಿವಿ ಕಾಲೇಜುಗಳಲ್ಲಿ ಅತೀ ಹೆಚ್ಚು ರ‍್ಯಾಂಕ್ ಗಳಿಸಿದ ಕಾಲೇಜುಗಳ ಪೈಕಿ ಅಗ್ರಸ್ಥಾನಿಯಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ರ‍್ಯಾಂಕ್ ಪಟ್ಟಿಯಲ್ಲಿ 2009ರಿಂದಲೂ ಮುಂಚೂಣಿಯಲ್ಲಿರುವ ಆಳ್ವಾಸ್ ಕಾಲೇಜು, ಇಲ್ಲಿಯವರೆಗೆ ಒಟ್ಟು 447 ರ‍್ಯಾಂಕ್‌ಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿನಂದಿಸಿದ್ದಾರೆ.


0 Comments