ಮೂಡುಬಿದಿರೆ : ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನ ಮತ್ತು 1ಕಂಚಿನ ಪದಕ ಪಡೆದು ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯ ವಿದ್ಯಾಥಿ೯ನಿ ಸಹಳಾ ಹಾಗೂ ತರಬೇತಿ ನೀಡಿರುವ ಶಿಕ್ಷಕಿ ಸುಚಿತ್ರಾ ಅವರನ್ನು ಸಂಸ್ಥೆಯ ವತಿಯಿಂದ ಬುಧವಾರ ಅಭಿನಂದಿಸಿ ಸನ್ಮಾನಿಸಲಾಯಿತು.
ಉದ್ಯಮಿ ನಂದಕುಮಾರ್ ಕುಡ್ವ, ವಿದ್ಯಾವಧ೯ಕ ಸಂಘದ ಟ್ರಸ್ಟಿ ಯುವರಾಜ್ ಜೈನ್ ಕಲ್ಲೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್ ಡಿ ಎಂಸಿ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು.
ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಶಿಕ್ಷಕಿ ಹಷಾ೯ ಸನ್ಮಾನಿತರನ್ನು ಪರಿಚಯಿಸಿದರು. ಸ್ಪೂತಿ೯ ಸಂಸ್ಥೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಶಮಿ೯ಳಾ ವಾಸ್ ಕಾಯ೯ಕ್ರಮ ನಿರೂಪಿಸಿದರು. ಸುಮನಾ ವಂದಿಸಿದರು.
ಜೂನಿಯರ್ ವಿಭಾಗದಲ್ಲಿ ಶಾಟ್ ಪುಟ್ ಹಾಗೂ 4×100 ಮೀ ಮಿಕ್ಷೆಡ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ 2 ಚಿನ್ನದ ಪದಕ ಹಾಗೂ 200 ಮೀ ಓಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಪಡೆದು ಬೆಳಿಗ್ಗೆ ಸಂಸ್ಥೆಗೆ ಆಗಮಿಸಿರುವ ಸಹಳಾ ಮತ್ತು ಸುಚಿತ್ರಾ ಅವರನ್ನು ಬ್ಯಾಂಡ್ ಮೂಲಕ ಸ್ವಾಗತಿಸಿ ಪುಷ್ಪಾಪ೯ಣೆ ಮಾಡಲಾಯಿತು.


0 Comments