ಮೂಡುಬಿದಿರೆಯಲ್ಲಿ ನಾಟಕ ಕಲಾವಿದರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆಯಲ್ಲಿ ನಾಟಕ ಕಲಾವಿದರಿಗೆ ಸನ್ಮಾನ
 ಮೂಡುಬಿದಿರೆ : ಮಂಗಳವಾರದಂದು ಕನ್ನಡ ಭವನದಲ್ಲಿ ಹಲವು ವಷ೯ಗಳ ನಂತರ ಪ್ರದಶ೯ನಗೊಂಡಚಾ ಪರ್ಕ ತಂಡದ ಸೂಪರ್ ಹಿಟ್ ನಾಟಕ ‘ಯಾನೊರಿ ಬರೊಲಿಯಾ’ ಪ್ರಥಮ ಪ್ರಯೋಗದ ಸಂದಭ೯ದಲ್ಲಿ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಸದಾಶಿವ ಅಮೀನ್ ಹಾಗೂ ತಿಮ್ಮಪ್ಪ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಸಂಪಿಗೆ ಚರ್ಚ್ ಧರ್ಮಗುರುಗಳಾದ ರೆ.ಫಾ.ವಿನ್ಸೆಂಟ್ ಡಿಸೋಜ ಅವರು ನಾಟಕದ ಮೊದಲ ಪ್ರಯೋಗವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ, ಬಿಜೆಪಿ ಮುಖಂಡರಾದ ಸುದರ್ಶನ ಎಂ, ರಂಜಿತ್ ಪೂಜಾರಿ, ತಂಡದ ಸಂಚಾಲಕಿ ಶರ್ಮಿಳಾ ಡಿ.ಕಾಪಿಕಾಡ್, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಮೇಘನಾಥ ಶೆಟ್ಟಿ, ದಿವಾಕರ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್, ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.

ಸಂಘಟಕ ಅಶ್ರಫ್ ವಾಲ್ಪಾಡಿ, ಹಫೀಝ್ ತೋಡಾರ್,ಸುರೇಶ್ ಅಂಚನ್ ಜಯಶ್ರೀ, ಬಾಲರಾಜ್ ನೆಲಗುಡ್ಡೆ, ಸಂತೋಷ್ ಶೆಟ್ಟಿ ಮಿಜಾರ್, ದೀಪ್ತಿ,ನಿಶಾ, ಶರತ್ ದೇವಾಡಿಗ, ಸಿದ್ದೀಕ್ ಗಂಟಾಲ್ಕಟ್ಟೆ,ರಶೀದ್ ವಾಲ್ಪಾಡಿ, ಗೋಪಾಲ ವಾಲ್ಪಾಡಿ, ಸ್ವಾತಿಕ್ ಮಕ್ಕಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments