ಮೂಡುಬಿದಿರೆ : ಸುರೇಶ್ ಅಂಚನ್, ವಿಲ್ಫ್ರೆಡ್ ಪಿಂಟೋ ಅವರಿಗೆ ' ಕರಾವಳಿ ಸಮಾಜ ಸೇವಾ ರತ್ನ' ಪ್ರಶಸ್ತಿ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ : ಸುರೇಶ್ ಅಂಚನ್, ವಿಲ್ಫ್ರೆಡ್ ಪಿಂಟೋ ಅವರಿಗೆ ' ಕರಾವಳಿ ಸಮಾಜ ಸೇವಾ ರತ್ನ' ಪ್ರಶಸ್ತಿ
    
ಮೂಡುಬಿದಿರೆ : ತಾಲೂಕಿನ ಶಿರ್ತಾಡಿಯ ಕರಾವಳಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಇತ್ತೀಚೆಗೆ ನಡೆದ ಹದಿಮೂರನೇ ವರ್ಷದ ಯಕ್ಷಗಾನ ಬಯಲಾಟದಲ್ಲಿ ಸಮಾಜ ಸೇವಕರಾದ ಜಯಶ್ರೀ ಹೊಟೇಲ್ ಮಾಲಕ ಸುರೇಶ್ ಅಂಚನ್ ಹಾಗೂ ವಾಲ್ಪಾಡಿಯ ವಿಲ್ಫ್ರೆಡ್ ಪಿಂಟೋ ಅವರಿಗೆ ' ಕರಾವಳಿ ಸಮಾಜ ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಶಿರ್ತಾಡಿ ಸೊಸೈಟಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾಶಿಪಟ್ಣ ಸೊಸೈಟಿ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ., ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ರಿಕ್ಷಾ ಮಾಲಕ ವಿಶ್ವನಾಥ ಪೂಜಾರಿ , ವಿಶ್ವನಾಥ ಕೋಟ್ಯಾನ್ ಹನ್ನೇರು, ಕರಾವಳಿ ಫ್ರೆಂಡ್ಸ್ ಸಂಚಾಲಕ ಸಂದೀಪ್ ಸಾಲ್ಯಾನ್, ಅಧ್ಯಕ್ಷ ಪ್ರಸಾದ್ ಬೋರುಗುಡ್ಡೆ,ಕಾರ್ಯದರ್ಶಿ ಪ್ರಶಾಂತ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
     ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments