ಮೂಡುಬಿದಿರೆ : ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸಾಫ್ಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಶ್ರೀ ಮಹಾವೀರ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಇದೀಗ ಮಹಾರಾಷ್ಟ್ರದ ಅಮ್ರಾವತಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಾದ ಎಸ್. ಜಿ. ಶಶಿಧರ, ಮೊಹಮ್ಮದ್ ಜುನೈದ್, ಪ್ರಮೋದ್ ಸಿ., ಅಭಿಷ್ರುತ್ ಹಾಗೂ ನವ್ಯಶ್ರೀ ಜೈನ್ ಆಯ್ಕೆಯಾಗಿರುವ ವಿದ್ಯಾರ್ಥಿಗಳು.
ಇವರಿಗೆ ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಕ್ಷಿತ್ ರೈ ತರಬೇತಿ ನೀಡಿರುತ್ತಾರೆ.
ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರುಗಳು, ಅಧ್ಯಾಪಕ, ಅಧ್ಯಾಪಕೇತರವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.


0 Comments