ಕಲ್ಲಬೆಟ್ಟು ಶಾಲೆಯಲ್ಲಿ ಮೆಟ್ರಿಕ್ ಮೇಳ*ವ್ಯವಹಾರಿಕ ಜ್ಞಾನ ಬೆಳೆಸಲು ವ್ಯಾಪಾರಸ್ಥರಾದ ಪುಟಾಣಿ ಮಕ್ಕಳು

ಜಾಹೀರಾತು/Advertisment
ಜಾಹೀರಾತು/Advertisment
ಕಲ್ಲಬೆಟ್ಟು ಶಾಲೆಯಲ್ಲಿ ಮೆಟ್ರಿಕ್ ಮೇಳ
*ವ್ಯವಹಾರಿಕ ಜ್ಞಾನ ಬೆಳೆಸಲು ವ್ಯಾಪಾರಸ್ಥರಾದ ಪುಟಾಣಿ ಮಕ್ಕಳು
  ವ್ಯವಹಾರಿಕ ಜ್ಞಾನ, ಸ್ವತಂತ್ರ ಉದ್ಯಮ, ಸ್ವಾವಲಂಬಿ ಜೀವನ ನಡೆಸಲು ಬೇಕಾದಂತಹ ಆತ್ಮಸ್ಥೈರ್ಯ ಮಕ್ಕಳಲ್ಲಿ ಬೆಳೆಸುವ ನಿಟ್ಟಿಯಲ್ಲಿ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು ಇಲ್ಲಿ ಶನಿವಾರ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು.
ಶಾಲೆಯ ಜಗುಲಿಯನ್ನು ಅಂಗಡಿ ಕೋಣೆಗಳಾಗಿ ಮಾಪಾ೯ಡು ಮಾಡಿ ಆ ಸ್ಟಾಲ್ ಗಳಲ್ಲಿ ಮನೆಯಲ್ಲಿ ಬೆಳೆದ ವಿವಿಧ ರೀತಿಯ ತರಕಾರಿಯನ್ನು ಒಳಗೊಂಡ ಅಂಗಡಿ, ಹೂವಿನ, ಹಣ್ಣು ಹಂಪಲುಗಳು, ಸಿಹಿ ತಿನಿಸುಗಳು, ತಂಪು ಪಾನೀಯಗಳು, ಆರೋಗ್ಯವಧ೯ಕ ತಿನಿಸುಗಳು, ಪಾನೀಯಗಳು, ಫ್ಯಾನ್ಸಿ, ಚರ್ ಮುರಿ, ತರಕಾರಿ, ಹಣ್ಣುಗಳ ಸ್ಲ್ಯಾಡ್ಸ್, ಪಾನಿಪುರಿ, ಹೂವಿನ ಗಿಡಗಳು, ಐಸ್ ಕ್ಯಾಂಡಿ ಮತ್ತು ದಿನಸಿ ಸಾಮಾಗ್ರಿಗಳನ್ನು ವಿದ್ಯಾಥಿ೯ಗಳು ಮಾರಾಟ ಮಾಡಿದರು. 
  ನಸ೯ರಿ ಮಕ್ಕಳಿಂದ ತರಕಾರಿ, ದಿನಸಿ ಹಾಗೂ ತರಕಾರಿ ಮಾರಾಟ : ಕಲ್ಲಬೆಟ್ಟು ಶಾಲೆಯಲ್ಲಿ ನಸ೯ರಿಯಿಂದ 8ನೇ ತರಗತಿ ವರೆಗಿನ 200ರಷ್ಟು ವಿದ್ಯಾರ್ಥಿಗಳಿದ್ದು ಅವರೆಲ್ಲರನ್ನು ಈ ಮೆಟ್ರಿಕ್ ಮೇಳದಲ್ಲಿ ಭಾಗವಹಿಸುವಂತೆ ಮಾಡಿದ್ದು ಅದರಲ್ಲೂ ಎಲ್ ಕೆ ಜಿ ಮತ್ತು ಯುಕೆಜಿಯ ಪುಟಾಣಿಗಳು ಶಿಕ್ಷಕಿಯರ ಸಹಾಯದಿಂದ ತರಕಾರಿ, ದಿನಸಿ ಸಾಮಾಗ್ರಿ ಹಾಗೂ ಸಿಹಿ ತಿನಿಸುಗಳನ್ನು ಮಾರಾಟ ಮಾಡಲು ಕುಳಿತುಕೊಂಡಿರುವುದು ಗಮನ ಸೆಳೆಯಿತು. 
   ಆರೋಗ್ಯ ವಧ೯ಕ ತರಕಾರಿಗಳಾದ ನುಗ್ಗೆಸೊಪ್ಪು, ಒಂದೆಲಗದ ಸೊಪ್ಪು ಸಹಿತ ವಿವಿಧ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಆರನೇ ತರಗತಿಯ ವಿದ್ಯಾಥಿ೯ಗಳು ಪ್ಲಾಸ್ಟಿಕ್ ಚೀಲ ಬಳಸದೆ ಬಟ್ಟೆ ಚೀಲ ಹಾಗೂ ಪೇಪರ್ ನಲ್ಲಿ ಹಾಕಿ ನೀಡುವ ಮೂಲಕ ಪರಿಸರ ನಾಶ ಮಾಡುವ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಿದರು.
ವ್ಯಾಪಾರದಲ್ಲಿ ವಿದ್ಯಾಥಿ೯ಗಳ ಗಿಮಿಕ್ : ಹೂವಿನ ಸ್ಟಾಲ್ ನ್ನು ಇಟ್ಟುಕೊಂಡಿದ್ದ ಹುಡುಗರು ಮಕ್ಕಳ ಹೆತ್ತವರ ಬಳಿಗೆ ಹೋಗಿ ತೆಗೆದುಕೊಳ್ಳುವಂತೆ ಚಚೆ೯ ಮಾಡುತ್ತಿದ್ದರು ಯಾರೂ ತೆಗೆದುಕೊಳ್ಳದಾಗ ಹುಡುಗಿಯರು ಇಟ್ಟಿದ್ದ ಅಂಗಡಿಯ ಬಳಿಗೆ ಹೋಗಿ ನಾವು ಹತ್ತು ರೂಗೆ ನೀಡುತ್ತೇವೆ ನೀವು 20 ರೂಗೆ ಮಾರಾಟ ಮಾಡುವಂತೆ ಸೂಚಿಸುತ್ತಿರುವುದು ಕಂಡು ಬಂತು. 
   ಲಾಭಾಂಶವನ್ನು ಶಾಲೆಗೆ ನೀಡಲು ಇದ್ದುದರಿಂದ ವಿದ್ಯಾಥಿ೯ಗಳು ತಾವು ಮಾರಾಟ ಮಾಡುತ್ತಿದ್ದ ವಸ್ತುಗಳಿಗೆ ಅಧಿಕ ದರವನ್ನು ನಿಗದಿ ಪಡಿಸಿದ್ದರು ಆದರೆ ಗಿರಾಕಿಗಳು ದರದ ಬಗ್ಗೆ ಚಚಿ೯ಸದೆ ಮಕ್ಕಳು ಹೇಳಿದ ರೇಟನ್ನೇ ನೀಡುವ ಮೂಲಕ ಮಕ್ಕಳ ವ್ಯಾಪಾರಕ್ಕೆ ಸಹಕಾರ ನೀಡಿದಲ್ಲದೆ ಅಧ್ಯಾಪಕ ವೃಂದದವರು ಕೂಡಾ ಮಕ್ಕಳಿಗೆ ಪ್ರೋತ್ಸಾಹ ನೀಡಿ ಗಮನ ಸೆಳೆದರು.
 ----------------------------
ಮೆಟ್ರಿಕ್ ಮೇಳ ಉದ್ಘಾಟನೆ : ಪುರಸಭೆಯ ನಿಕಟಪೂವ೯ ವಾಡ್ ೯ ಸದಸ್ಯ ಜೊಸ್ಸಿ ಮಿನೇಜಸ್ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಮಾತನಾಡಿ ಈ ಮೇಳದ ಮೂಲಕ ವಿದ್ಯಾಥಿ೯ಗಳು ಜೀವನ ಪಾಠ ಕಲಿಯಬಹುದು. ಸಾಧನೆ ಮಾಡಲು ಕಠಿಣ ಪರಿಶ್ರಮ, ಉತ್ತಮ ವ್ಯಕ್ತಿತ್ವ ಮುಖ್ಯ. ಯಶಸ್ವಿ ಉದ್ಯಮಿ, ಸಾಧಕರಾಗಲು ಪರಿಶ್ರಮದೊಂದಿಗೆ ಗುರಿಯೂ ಮುಖ್ಯ ಎಂದ ಅವರು ವಿದ್ಯಾಥಿ೯ಗಳು ರಾತ್ರಿ ಕನಸು ಕಾಣದೆ ಹಗಲುಗನಸನ್ನು ಕಾಣಿ ಅದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಸಲಹೆ ನೀಡಿದರು. 
  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ್ ಅಧ್ಯಕ್ಷತೆ ವಹಿಸಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಭಾಗವಹಿಸಿ ಕಾಯ೯ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಿ. ಆರ್. ಪಿ ಮಹೇಶ್ವರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಉಪಾಧ್ಯಕ್ಷೆ ಗಾಯತ್ರಿ, ಸದಸ್ಯೆ ಸೌಧ, ಮುಖ್ಯ ಶಿಕ್ಷಕಿ ನಿಶಾ ಹಾಗೂ ಶಿಕ್ಷಕಿಯರು ಈ ಸಂದಭ೯ದಲ್ಲಿದ್ದರು. 
ವಿದ್ಯಾಥಿ೯ ಮಹಮ್ಮದ್ ಬಿಶೀರ್ ಸ್ವಾಗತಿಸಿದರು. ಪೂಜಾ ಕಾಯ೯ಕ್ರಮ ನಿರೂಪಿಸಿದರು. ತಿಲಕ್ ಚಂದ್ರ ವಂದಿಸಿದರು.

Post a Comment

0 Comments