ರೈತರ ಕೃಷಿ ನಾಶ ಮಾಡಲು ಹೊರಟ ಸ್ಟರ್ ಲೈಟ್ ಕಂಪನಿ : ಪರಿಹಾರ ನೀಡದೆ ಕೆಲಸ ಆರಂಭಿಸಿದರೆ ಆಹೋರಾತ್ರಿ ಧರಣಿಯ ಎಚ್ಚರಿಕೆ ನೀಡಿದ ರೈತರು

ಜಾಹೀರಾತು/Advertisment
ಜಾಹೀರಾತು/Advertisment
ರೈತರ ಕೃಷಿ ನಾಶ ಮಾಡಲು ಹೊರಟ ಸ್ಟರ್ ಲೈಟ್ ಕಂಪನಿ : ಪರಿಹಾರ ನೀಡದೆ ಕೆಲಸ ಆರಂಭಿಸಿದರೆ ಆಹೋರಾತ್ರಿ ಧರಣಿಯ ಎಚ್ಚರಿಕೆ ನೀಡಿದ ರೈತರು
ಮೂಡುಬಿದಿರೆ : ಪರಿಹಾರ ನೀಡದೆ ಕಾನೂನು ಬಾಹಿರವಾಗಿ ಫಲ ನೀಡುತ್ತಿರುವ ಅಡಿಕೆ, ತೆಂಗು ಮುಂತಾದ ಕೃಷಿಯನ್ನು ನಾಶ ಪಡಿಸುವ ಕೆಲಸವನ್ನು ಆರಂಭಿಸಿದರೆ ಸ್ಟರ್‌ಲೈಟ್ ಕಂಪನಿಯ ವಿರುದ್ಧ ಆಹೋರಾತ್ರಿ ಪ್ರತಿಭಟನೆಯನ್ನು ಮಾಡಲಾಗುವುದು ಮತ್ತು ರೈತರು ಕುದ್ರಿಪದವಿನಲ್ಲಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.  

 ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರಿಪದವಿನ ರೆಬೆಲ್ಲೂ ಕಂಪೌಂಡ್‌ನ ಜಾನ್ ರೆಬೆಲ್ಲೋ ಅವರ ಕೃಷಿ ಜಮೀನಿನಲ್ಲಿ ಸ್ಟರ್‌ಲೈಟ್ ಕಂಪನಿಯ ಕಾಮಿ೯ಕರು ವಿದ್ಯುತ್ ಲೈನ್ ಅಳವಡಿಕೆಗೆ ಕಾಮಗಾರಿ ಆರಂಭಿಸಲು ಯತ್ನಿಸಿದಾಗ ಸ್ಥಳೀಯ ರೈತ ಮುಖಂಡರು ಹಾಗೂ ಸಂತ್ರಸ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದರು. 

 “ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಯ ಆದೇಶದಂತೆ ಮೊದಲು ಪರಿಹಾರ ನೀಡಿ, ಅಗತ್ಯ ದಾಖಲೆಗಳನ್ನು ಒದಗಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು. ಆದರೆ ಕಂಪನಿ ಇದನ್ನು ಪಾಲಿಸುತ್ತಿಲ್ಲ, ಮೊದಲು ಸೂಕ್ತ ದಾಖಲೆ ಹಾಗೂ ನ್ಯಾಯಸಮ್ಮತ ಪರಿಹಾರ ಒದಗಿಸಬೇಕು ಹಾಗೂ ಇದೀಗ ರೈತರಿಗೆ ನಿಗಧಿ ಪಡಿಸಿದ ಪರಿಹಾರ ಅತ್ಯಂತ ಕಡಿಮೆಯಾಗಿದ್ದು ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುವುದಾಗಿ ಸಂತ್ರಸ್ತರ ಪರವಾಗಿ ರೈತ ಮುಖಂಡ ಶಾಂತಿಪ್ರಸಾದ್ ಹೆಗ್ಡೆ ಎಚ್ಚರಿಸಿದ್ದಾರೆ.

ಸಂತ್ರಸ್ತರಾದ ಫಿಲೋಮಿನಾ ಹಾಗೂ ಜಾನ್ ರೆಬೆಲ್ಲೂ ಮಾಧ್ಯಮದವರೊಂದಿಗೆ ಮಾತನಾಡಿ, ತೋಟದಲ್ಲಿರುವ 450 ಕಂಗು, ತೆಂಗು, ಕಾಳು ಮೆಣಸು ಹಾಗೂ ಹಣ್ಣು ಹಂಪಲಿನ ಮರಗಳನ್ನು ಕಡಿದು ಟವರ್ ನಿಮಿ೯ಸಲು ಮುಂದಾಗಿದ್ದಾರೆ. ನಾವು ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದೇನೆ. ಕೃಷಿ ಭೂಮಿಯನ್ನು ಕಳೆದುಕೊಳ್ಳಲು ಬೇಸರವಾಗುತ್ತಿದೆ “ರಾಷ್ಟ್ರದ ಹಿತದೃಷ್ಟಿಯಿಂದ ವಿದ್ಯುತ್ ಯೋಜನೆಗೆ ನಮ್ಮ ಜಮೀನನ್ನು ಬಿಟ್ಟುಕೊಡಲು ನಾವು ಸಿದ್ಧರಿದ್ದೇವೆ. ಆದರೆ, ಇದುವರೆಗೆ ಕಂಪನಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಅಧಿಕೃತ ದಾಖಲೆಗಳನ್ನು ನೀಡಿಲ್ಲ,” ಎಂದು ಆರೋಪಿಸಿದರು. ಯಾವುದೇ ಸೂಕ್ತ ಪರಿಹಾರ ನೀಡದೆ ಅಕ್ರಮವಾಗಿ ಜಮೀನಿಗೆ ಪ್ರವೇಶಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹಾಗೂ ಕುಟುಂಬಸ್ಥರು ಅಳಲು ತೋಡಿಕೊಂಡರು.


ಈ ಸಂದರ್ಭದಲ್ಲಿ 
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆಲ್ಫೋನ್ಸ್ ಡಿಸೋಜ, ಸುಕುಮಾರ್ ಶೆಟ್ಟಿ ಹಾಗೂ ಸ್ಥಳೀಯ ರೈತರು, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ., ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮನವಿಗೆ ಸ್ಪಂದಿಸದ ಅಧಿಕಾರಿಗಳು:ಈ ಕುರಿತು ಮೂರು ಬಾರಿ ನೋಂದಾಯಿತ ಅಂಚೆ ಮೂಲಕ ಮನವಿ ಸಲ್ಲಿಸಿದ್ದರೂ ಯಾವುದೇ ಉತ್ತರ ಬಂದಿಲ್ಲ. ನೇರವಾಗಿ ಮನವಿ ನೀಡಲು ಹೋದಾಗಲೂ ಅಧಿಕಾರಿಗಳು ಸ್ವೀಕರಿಸಿಲ್ಲ ಎಂದು ಸಂತ್ರಸ್ತರು ತಿಳಿಸಿದ್ದಾರೆ.ಕೃಷಿಯೇ ತಮ್ಮ ಬದುಕಿನ ಏಕೈಕ ಆಧಾರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ರೈತರು ವಿನಂತಿಸಿದ್ದಾರೆ.

Post a Comment

0 Comments